ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ದಿಗಂತ್-ಐಂದ್ರಿತಾ ದಂಪತಿ ಮೊದಲ ದಿನವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಇಂದು ವಿಚಾರಣೆಗೆ ಹಾಜರಾದ ದಂಪತಿಯನ್ನು ಸಿಸಿಬಿ ವಶಕ್ಕೆ ತೆಗೆದುಕೊಳ್ಳಬಹುದು ಎನ್ನಲಾಗಿತ್ತು. ಆದರೆ ಇಬ್ಬರೂ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ ಹಿನ್ನಲೆಯಲ್ಲಿ ಅವರನ್ನು ಸದ್ಯಕ್ಕೆ ಮನೆಗೆ ಕಳುಹಿಸಲಾಗಿದೆ. ಆದರೆ ಇಷ್ಟಕ್ಕೇ ಮುಗಿದಿಲ್ಲ. ಮತ್ತೊಂದು ಸುತ್ತಿನ ವಿಚಾರಣೆಗೆ ಅವರನ್ನು ಮತ್ತೆ ಕಚೇರಿಗೆ ಕರೆಸಲಾಗುವುದು ಎಂದು ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ಹೀಗಾಗಿ ದಂಪತಿ ಇನ್ನೂ ನಿರಾಳವಾಗುವಂತಿಲ್ಲ.