ಡ್ರಗ್ಸ್ ಪಾರ್ಟಿ : ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಗೆ ಬಿಗ್ ಶಾಕ್

ಶುಕ್ರವಾರ, 25 ಸೆಪ್ಟಂಬರ್ 2020 (21:45 IST)
ಬಾಲಿವುಡ್ ನ ಡ್ರಗ್ ಲಿಂಕ್ ನಲ್ಲಿ ಘಟನಾನುಘಟಿ ನಾಯಕ, ನಾಯಕಿಯರ ಹೆಸರುಗಳು ಕೇಳಿಬರುತ್ತಿವೆ.

ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿಖಾನ್, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರುಗಳು ಹರಿದಾಡುತ್ತಿವೆ.

ಈ ನಡುವೆ 2019 ರಲ್ಲಿ ಡ್ರಗ್ ಪಾರ್ಟಿ ನಡೆಸಿದ್ದಾರೆ ಎನ್ನಲಾದ ನಿರ್ಮಾಪಕ ಕರಣ್ ಜೋಹರ್ ಅವರನ್ನು ಶೀಘ್ರದಲ್ಲೇ ಎನ್‌ಸಿಬಿ ವಿಚಾರಣೆಗೆ ಕರೆಸಿಕೊಳ್ಳಲಿದೆ ಎಂದು ಸಿರೋಮನಿ ಅಕಾಲಿ ದಳದ  ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಶೀಘ್ರದಲ್ಲೇ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರನ್ನು ಕರೆಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಸಜ್ಜಾಗಿದೆ ಎಂದು ಸಿರೋಮಾನಿ ಅಕಾಲಿ ದಳ (ಎಸ್‌ಎಡಿ) ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

2019 ರಲ್ಲಿ ಕರಣ್ ಜೋಹರ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಡ್ರಗ್ ಪಾರ್ಟಿ ಕುರಿತು ಸಿರ್ಸಾ ಕಳೆದ ವಾರ ಎನ್‌ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾಗೆ ದೂರು ನೀಡಿದ್ದರು.

ಅಲ್ಲಿ ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ವಿಕ್ಕಿ ಕೌಶಲ್, ವರುಣ್ ಧವನ್, ರಣಬೀರ್ ಕಪೂರ್, ಮಲೈಕಾ ಅರೋರಾ ಮತ್ತು ಇತರರಿದ್ದರು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ