ನಿಮ್ಮ ದುರುಪಯೋಗಕ್ಕೆ ಲಾಕ್ ಡೌನ್ ಮಾಡಬೇಡಿ: ದುನಿಯಾ ವಿಜಯ್

ಬುಧವಾರ, 5 ಜನವರಿ 2022 (10:10 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಾವಳಿಗಳನ್ನು ಹಾಕಿದ ಬೆನ್ನಲ್ಲೇ ನಟ ದುನಿಯಾ ವಿಜಯ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಈಗ ಕರ್ಫ್ಯೂ ವಿಧಿಸಲಾಗಿದೆ. ಮುಂದೆ ಪ್ರಕರಣಗಳು ಹೆಚ್ಚಾದರೆ ಲಾಕ್ ಡೌನ್ ಸ್ಥಿತಿ ಬರಬಹುದು. ಈಗಾಗಲೇ ಚಿತ್ರಮಂದಿರಗಳಲ್ಲಿ ಶೇ.50 ಪ್ರೇಕ್ಷಕರಿಗಷ್ಟೇ ಅವಕಾಶ ಮಾಡಿಕೊಡಲಾಗಿದೆ.

ಇದರ ಬೆನ್ನಲ್ಲೇ ಮಾತನಾಡಿರುವ ದುನಿಯಾ ವಿಜಯ್ ‘ರಾಜಕೀಯ ದುರುಪಯೋಗಕ್ಕೆ ಲಾಕ್ ಡೌನ್ ಮಾಡಬೇಡಿ. ಈ ಹಿಂದೆ ಲಾಕ್ ಡೌನ್ ಮಾಡಿದ್ದರಿಂದ ಬಡವರಿಗೆ ಕಷ್ಟವಾಗಿತ್ತು, ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದಾರೆ. ನಿಮ್ಮ ಸೌಲಭ್ಯಗಳಿಗೆ ಜನರನ್ನು ಬಲಿಪಶು ಮಾಡಬೇಡಿ.  ಅಕ್ಕಿ ಕೊಟ್ಟಿದ್ದರು. ಆದರೆ ಇದು ಕೆಲವರಿಗೆ ಸಿಕ್ಕಿದೆ, ಕೆಲವರಿಗೆ ಇಲ್ಲ. ಎಷ್ಟು ಅನ್ಯಾಯವಾಗಿದೆ ಗೊತ್ತು. ಹೀಗಾಗಿ ಸರ್ಕಾರಕ್ಕೆ ನನ್ನ ಮನವಿ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ