ದುನಿಯಾ ವಿಜಯ್ ಭೀಮ ಮುಹೂರ್ತ ಫಿಕ್ಸ್

ಶನಿವಾರ, 9 ಏಪ್ರಿಲ್ 2022 (09:20 IST)
ಬೆಂಗಳೂರು: ಸಲಗ ನಂತರ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಲಿರುವ ಭೀಮ ಸಿನಿಮಾದ ಮುಹೂರ್ತ ಏಪ್ರಿಲ್ 18 ರಂದು ನಡೆಯಲಿದೆ.

ನಗರದ ಬಂಡೆ ಮಹಾಕಾಳಿ ಕ್ಷೇತ್ರದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ಮೊದಲು ಸಲಗ ಮುಹೂರ್ತವೂ ಇಲ್ಲಿಯೇ ನಡೆದಿತ್ತು.

ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇನ್ನು, ಅಡಿಯೋ ರೈಟ್ಸ್ ದುಬಾರಿ ಬೆಲೆಗೆ ಮಾರಾಟವಾಗಿದೆ. ವಿಜಯ್ ತೆಲುಗು ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಭೀಮ ಸಿನಿಮಾಗೆ ಚಾಲನೆ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ