ಸಿನಿಮಾಗೆ ಎಂಟ್ರಿ ಕೊಟ್ಟ ಸಚಿವ ಸುಧಾಕರ್

ಶುಕ್ರವಾರ, 8 ಏಪ್ರಿಲ್ 2022 (10:26 IST)
ಬೆಂಗಳೂರು: ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ ಸಿನಿಮಾವೊಂದರಲ್ಲಿ ಮುಖ್ಯಮಂತ್ರಿಯಾಗಿ ಪಾತ್ರ ಮಾಡಿದ್ದರು. ಇದೀಗ ಸಚಿವ ಸುಧಾಕರ್ ಸರದಿ.

ಆರೋಗ್ಯ ಸಚಿವ ಡಾ. ಸುಧಾಕರ್ ಈಗ ಅದೇ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತನುಜಾ ಎನ್ನುವ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ.

ಈ ಸಿನಿಮಾದಲ್ಲಿ ಈ ಮೊದಲು ಸಿಎಂ ಆಗಿ ಯಡಿಯೂರಪ್ಪ ಅಭಿನಯಿಸಿದ್ದರೆ, ಈಗ ಆರೋಗ್ಯ ಸಚಿವರಾಗಿಯೇ ಡಾ.ಸುಧಾಕರ್ ಕಾಣಿಸಿಕೊಂಡಿದ್ದಾರೆ. ಕೊರೋನಾ, ಲಾಕ್ ಡೌನ್ ಸಂದರ್ಭದಲ್ಲಿ ನಡೆದ ಬಾಲಕಿಯೊಬ್ಬಳ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ