ಪ್ರತಾಪ್ ರೆಡ್ಡಿಯಾದ ದುನಿಯಾ ವಿಜಯ್

ಬುಧವಾರ, 16 ಮಾರ್ಚ್ 2022 (17:40 IST)
ಬೆಂಗಳೂರು: ನಟ ದುನಿಯಾ ವಿಜಯ್ ಇದೀಗ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ನಂದಮೂರಿ ಬಾಲಕೃಷ್ಣ ಮುಂದಿನ ಸಿನಿಮಾದಲ್ಲಿ ವಿಜಯ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ದುನಿಯಾ ವಿಜಯ್ ಪಾತ್ರ ಪರಿಚಯ ಮತ್ತು ಫಸ್ಟ್ ಲುಕ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ದುನಿಯಾ ವಿಜಯ್ ಮುಸಳಿ ಮಡಗು ಪ್ರತಾಪ್ ರೆಡ್ಡಿ ಎನ್ನುವ ಖಡಕ್ ಪಾತ್ರ ಮಾಡುತ್ತಿದ್ದಾರೆ. ಪೋಸ್ಟರ್ ನಲ್ಲಿಯೇ ಅವರದ್ದು ನೆಗೆಟಿವ್ ಶೇಡ್ ಇರುವ ಪಾತ್ರ ಎನ್ನುವುದು ಸ್ಪಷ್ಟವಾಗುತ್ತದೆ.

ಇತ್ತೀಚೆಗಷ್ಟೇ ದುನಿಯಾ ವಿಜಿ ಈ ಸಿನಿಮಾದ ಶೂಟಿಂಗ್ ನಲ್ಲೂ ಭಾಗಿಯಾಗಿದ್ದರು. ಈ ಮೂಲಕ ತೆಲುಗಿನಲ್ಲಿ ತಮ್ಮ ನಟನೆಯ ಖದರ್ ತೋರಿಸಲು ವಿಜಿ ಸಿದ್ಧರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ