ಏನ್ ಸ್ವಾಮಿ ಕರ್ನಾಟವನ್ನ ಪಾಕಿಸ್ತಾನ ಮಾಡ್ತಿದ್ದೀರಾ: ಗೃಹಮಂತ್ರಿಗೆ ನಟಿ ಕಾವ್ಯಶಾಸ್ತ್ರಿ ಕ್ಲಾಸ್‌

Sampriya

ಮಂಗಳವಾರ, 9 ಸೆಪ್ಟಂಬರ್ 2025 (15:04 IST)
Photo Credit X
ಮಂಡ್ಯ  ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ದಾಂಧಲೆ ವಿಚಾರವಾಗಿ ಗ್ರಹಮಂತ್ರಿ ಜಿ ಪರಮೇಶ್ವರ್ ವಿರುದ್ಧ ಕಿರುತೆರೆ ನಟಿ ಕಾವ್ಯ ಶಾಸ್ತ್ರಿ ಆಕ್ರೋಶ ಹೊರಹಾಕಿದ್ದಾರೆ. 


ಈ ವಿಚಾರವಾಗಿ ನಟಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 

ಮದ್ದೂರಿನ ಗಣೇಶ ವಿಸರ್ಜನೆಯ ವೇಳೆಯ ದಾಂಧಲೆಗೆ ಹಿಂದೂ ಸಂಘನೆಗಳು ಕಾರಣ ಎನ್ನುವ ಶಂಕೆ ಅಂದಿರೋ ಗೃಹಮಂತ್ರಿಗಳು. ನಾಚಿಕೆಯಾಗಬೇಕು ಸ್ವಾಮಿ, ಆ ಸ್ಥಾನದಲಿದ್ದು ಇಂತಹ ಮಾತುಗಳನ್ನು ಆಡೋಕ್ಕೆ. ಕರ್ನಾಟಕವನ್ನ
ಪಾಕಿಸ್ತಾನ ಮಾಡೋಕ್ಕೆ ಹೊರಟಿದ್ದೀರಾ ಹೇಗೇ ಎಂದು ಪ್ರಶ್ನೆ ಮಾಡಿದ್ದಾರೆ. 

ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ದಾಂಧಲೆ ನಡೆದಿದೆ. ಕೋಮ ಗಲಭೆಗೆ ಕಾರಣವಾಗಿದೆ. ಹಿಂದೂ ಸಂಘಟನೆಗಳಿಂದ ಸೋಮವಾರ ಪ್ರತಿಭಟನೆ ನಡೆದಿದೆ. ಉದ್ರಿಕ್ತ ಪ್ರತಿಭಟನಾಕಾರರ ಮೇಲೆ ಲಾಠಿ ಪೊಲೀಸರಿಂದ ಲಾಠಿ ಪ್ರಹಾರವೂ ನಡೆದಿದೆ. ರಾಜ್ಯವ್ಯಾಪಿ ಚರ್ಚೆಯಾಗುತ್ತಿರುವ ಈ ಘಟನೆ ಕುರಿತು ಇದೀಗ ನಟಿ ಕಾವ್ಯ ಶಾಸ್ತ್ರಿ ಗೃಹಮಂತ್ರಿ ಮಾತಿಗೆ ಆಕ್ರೋಶ ಹೊರಹಾಕಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ