ಸಾಮಾಜಿಕ ಜಾಲತಾಣಲದಲ್ಲಿ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಅವರ ನಿಧನ ಸುದ್ದಿ ಹರಿದಾಡುತ್ತಿದೆ. ನಟ ರಸ್ತೆ ಅಪಘಾತದಲ್ಲಿ ನಿಧನರಾದರು ಎಂಬ ವದಂತಿ ಹರಿದಾಡುತ್ತಿದೆ. ಇದೀಗ ಈ ವಿಚಾರವಾಗಿ ನಟಿಯೇ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಗೊಂದಲದ ವರದಿಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದು, ಅಪಘಾತದ ವರದಿ ಸುಳ್ಳು ಎಂದಿದ್ದಾರೆ.
ಇದರಿಂದ ಆತಂಕಕ್ಕೊಳಗಾದ ಆಕೆಯ ಅಭಿಮಾನಿಗಳು ಶಾಕ್‌ನಿಂದ ಹೊರಬಂದಿದ್ದಾರೆ.
ಅದಲ್ಲದೆ ಈ ರೀತಿಯ ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವ ವಿಷಯಕ್ಕೆ ಬೀಳದಂತೆ ಒತ್ತಾಯಿಸಿದ್ದಾರೆ.
ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಪುನರುಚ್ಚರಿಸಿದ ಅವರು, ಪರಿಶೀಲಿಸಿದ ಮಾಹಿತಿಯನ್ನು ಮಾತ್ರ ಅವಲಂಬಿಸುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡರು.
ಸದ್ಯ ನಾನು ಇದೀಗ ಕೆಲಸದಲ್ಲಿ ಕಾರ್ಯನಿರತವಾಗಿದ್ದು, ನಂತರ ದಿನದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದಿದ್ದಾರೆ.
ಈ ವದಂತಿ ಹರಡುವ ಕೆಲ ದಿನಗಳ ಮೊದಲು, ಕಾಜಲ್ ತನ್ನ ಪತಿ ಗೌತಮ್ ಕಿಚ್ಲು ಅವರೊಂದಿಗೆ ಮಾಲ್ಡೀವ್ಸ್ ಗೆಟ್‌ಅವೇಯ ಗ್ಲಿಂಪ್‌ಗಳನ್ನು ಹಂಚಿಕೊಂಡಿದ್ದರು. Instagram ನಲ್ಲಿ ಕನಸಿನ ಫೋಟೋಗಳ ಸರಣಿಯ ಮೂಲಕ ಹಂಚಿಕೊಂಡಿದ್ದರು.