ಡ್ರಗ್ಸ್ ಪ್ರಕರಣ ತನಿಖೆಗೆ ಇಡಿ: ತಾರೆಯರ ಆಸ್ತಿ ಮೇಲೆ ಕಣ್ಣು
ಶುಕ್ರವಾರ, 11 ಸೆಪ್ಟಂಬರ್ 2020 (09:25 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಂಧಿತರಾಗಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ, ಸಂಜನಾ ಅಲ್ಲದೆ, ರಾಹುಲ್, ರವಿಶಂಕರ್, ವೀರೇನ್ ಖನ್ನಾ ಮುಂತಾದವರಿಗೆ ಈಗ ಇಡಿ ಭಯ ಶುರುವಾಗಿದೆ.
ಈ ನಟಿಯರು, ಡ್ರಗ್ ಪೆಡ್ಲರ್ ಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಆಸ್ತಿ ಸಂಪಾದಿಸಿರುವುದರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ. ಹೀಗಾಗಿ ಪ್ರಕರಣ ಮತ್ತಷ್ಟು ಬಿಗಿಯಾಗಲಿದೆ. ಇಡಿ ಅಧಿಕಾರಿಗಳು ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಜತೆ ಚರ್ಚೆ ನಡೆಸಿದ್ದಾರೆ.