ಇಲ್ಲಿ ಸಿಕ್ಕ ಗಾಂಜಾ ಎಷ್ಟು ಅಂತ ಕೇಳಿದ್ರೆ ಶಾಕ್ ಆಗ್ತೀರಾ

ಗುರುವಾರ, 10 ಸೆಪ್ಟಂಬರ್ 2020 (23:01 IST)
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಜೋರು ಸದ್ದು ಮಾಡುತ್ತಿರುವಂತೆ ನಟಿಯರಾದ ರಾಗಿಣಿ, ಸಂಜನಾ ಅರೆಸ್ಟ್ ಆಗಿದ್ದಾರೆ.

ಈ ನಡುವೆ ಪ್ರಭಾವಿಗಳ ಮಕ್ಕಳು, ಕೆಲ ಸಿನಿಮಾನಟರು, ಉದ್ಯಮಿಗಳ ಹೆಸರು ಡ್ರಗ್ಸ್ ಕೇಸ್ ನಲ್ಲಿ ಕೇಳಿಬರತೊಡಗಿವೆ.

ಬೆಂಗಳೂರು ನಗರದ ಕೇಂದ್ರ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಟನ್ 350 ಕೆ.ಜಿ. 300 ಗ್ರಾಂ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿಗಳಾದ ಜ್ಞಾನಶೇಖರ್, ಸಿದ್ದುನಾಥ ಲಾವಟೆ, ನಾಗನಾಥ, ಚಂದ್ರಕಾಂತ್ ನನ್ನು ಬಂಧಿಸಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ