ಸಿನಿಮಾ ಆಸಕ್ತರಿಗೆ ಶುರುವಾಗ್ತಿದೆ ‘ಸಿನಿಮಾ ಸ್ಕೂಲ್’..

ಗುರುವಾರ, 26 ಡಿಸೆಂಬರ್ 2019 (14:01 IST)
ಈ ವರೆಗೂ ಸ್ಯಾಂಡಲ್ ವುಡ್ ನಲ್ಲಿ “ತರುಣ್ ಟಾಕೀಸ್” ಎಂಬ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ , ‘ರೋಜ್’, ‘ಮಾಸ್ ಲೀಡರ್’ ಹಾಗೂ ‘ವಿಕ್ಟರಿ-2’ ಗಳಂಥ ಸೂಪರ್ ಸಕ್ಸಸ್ ಸಿನೆಮಾಗಳನ್ನ ಸಿನಿಪ್ರಿಯರಿಗೆ ನೀಡಿದ್ದ ನಿರ್ಮಾಪಕ ತರುಣ್ ಶಿವಪ್ಪ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.ಹೌದು ಸಧ್ಯ ‘ಖಾಕಿ’ಚಿತ್ರಕ್ಕೆ ಬಂಡವಾಳ ಹಾಕಿ ಬೆನ್ನೆಲುಬಾಗಿ ನಿಂತಿರೋ ಇವ್ರು ‘ಸಿನಿಮಾ ಸ್ಕೂಲ್’ ಪ್ರಾರಂಭಿಸುತ್ತಿದ್ದಾರೆ.
 ಈ ಶಾಲೆಯನ್ನ ನಿರ್ಮಾಪಕ ಶಿವಪ್ಪ ಹಾಗೂ ನಿರ್ದೇಶಕ ವಿಶಾಲ್ ರಾಜ್ ಸೇರಿ ಮುನ್ನಡೆಸೋ ತಯಾರಿಯಲ್ಲಿದ್ದು ಹೊಸತನ ಮತ್ತು ವಿಭಿನ್ನತೆಯ ಕ್ರಿಯಾಶೀಲತೆಗೆ ಮುನ್ನುಡಿ ಬರೆಯೋ ಉತ್ಸಾಹದಲ್ಲಿದ್ದಾರೆ.ಸಿನೆಮಾ ತನ್ನುಸಿರು ಎಂದು ಕಲಾದೇವಿಯನ್ನ  ಆರಾಧಿಸೋರಿಗಾಗಿ ,ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ತರಬೇತಿ ನೀಡೋ ಸಲುವಾಗಿ ‘ಸಿನಿಮಾ ಸ್ಕೂಲ್’ ತರೆದಿದ್ದು,ಇದೇ ಜನವರಿ 15 ರಿಂದ ಶಾಲೆ ಶುರುವಾಗ್ತಿದೆ.
  ಇಲ್ಲಿ ಚಿತ್ರರಂಗದ ಯಾವ ವಿಭಾಗವನ್ನಾದರೂ ಆರಿಸಿಕೊಳ್ಳೋ ಅವಕಾಶವಿದ್ದು, ಆಯಾ ಆಸಕ್ತಿ ಹೊಂದಿದ ಪ್ರತಿಭೆಗಳಿಗೆ ವಿಭಾಗದ ಕೆಲಸವನ್ನ ಒಟ್ಟು ಮೂರು ಮತ್ತು ಆರು ತಿಂಗಳ ಕೋರ್ಸಿನಲ್ಲಿ  ಹೇಳಿಕೊಡಲಾಗುತ್ತದೆ.  ನಿರ್ದೇಶನ,ಛಾಯಾಗ್ರಹಣ,ಸಂಕಲನ,ಅಭಿನಯ,ಸಂಗೀತ,ನಿರೂಪಣೆ ಹೀಗೆ ಸಾಕಷ್ಟು ವಿಚಾರಗಳನ್ನ ನೀವೂ ಕಲಿಬೇಕು ಅಂದ್ರೆ, ನಾಗರಬಾವಿ ನಮ್ಮೂರ ತಿಂಡಿ ಹಿಂಭಾಗದಲ್ಲಿರೋ ಸವೆನ್ ವಂಡರ್ಸ್ ಕಟ್ಟಡದ 2 ನೇ ಮಹಡಿಗೆ ಜನವರಿ 15 ರಿಂದ ಸೇರಿಕೊಳ್ಳಬಹುದು.
 ಜೊತೆಗೆ ಇಲ್ಲಿ ಕೋರ್ಸು ಮುಗಿಸಿದ ಬ್ಯಾಚುಗಳಲ್ಲಿ ಯಾರು ದಿ ಬೆಸ್ಟ್ ಆಗಿರ್ತಾರೋ ಅವರಿಗೆ ವಿಶೇಷವಾಗಿ ತರುಣ್ ಟಾಕೀಸ್ ಅಡಿಯಲ್ಲಿ ಹೊಸ ಚಿತ್ರಗಳನ್ನ ಪ್ರಾರಂಭಿಸಿ ಅವಕಾಶಗಳನ್ನ ಕಲ್ಪಿಸಿಕೊಡಲಾಗತ್ತಂತೆ.ಹಾಗೇನೇ ಹೆಸರಾಂತ ಆದರ್ಶ ಫಿಲ್ಮಂ ಇನ್ಸ್ಟಿ ಟ್ಯೂಟ್ ಸೇರಿದಂತೆ ರಾಜ್ಯದ ಹಲವಾರು ಸಿನಿಮಾ ಶಾಲೆಗಳಲ್ಲಿ ಕಳೆದ 25 ವರ್ಷದಿಂದ ಕೆಲಸಮಾಡಿದ ಅನುಭವವಿರೋ ನಿರ್ದೇಶಕ ವಿಶಾಲ್ ರಾಜ್ ರೇ ಈ “ಸಿನಿಮಾ ಸ್ಕೂಲ್” ಗೆ ಪ್ರಾಂಶುಪಾಲರಾಗಿದ್ದಾರೆ. ವಿಶಾಲ್ ರಾಜ್ ಈಗಾಗಲೇ ‘ಸಾವಿತ್ರಿ ಬಾಯಿ ಫುಲೆ’, ‘ಇಂಗಳ ಮಾರ್ಗ’ ಮಿಂಚು ಸೇರಿದಂತೆ ಇನ್ನೊಂದಿಷ್ಟು ಸಿನೆಮಾಗಳಿಗೆ ನಿರ್ದೇಶನ ಸಹ ಮಾಡಿದ್ದಾರೆ.
ಅದೇನೇ ಇರಲಿ ಇಂಥಹ ರಂಗು ರಂಗಿನ ,ಬಣ್ಣದ ಲೋಕದಲ್ಲಿ ಕಲಾದೇವಿಯನ್ನ ರಾಧಿಸೋ ಬಯಕೆ ನಿಮಗಿದ್ದರೆ ನಂಬರ್#40,2 ನೇ ಮಹಡಿ,ನಮ್ಮೂರ ತಿಂಡಿ ಬಳಿ,ಎನ್.ಜಿ.ಇ.ಎಫ್.ಲೇಔಟ್ ಪಾರ್ಕ್ ಎದುರು,ನಾಗರಬಾವಿ, ಬೆಂಗಳೂರು-560072.ಮೊಬೈಲ್ ಸಂಖ್ಯೆ 9206920689 ಈ ನಂಬರ್ ಗೆ ನೀವು  ಸಂಪರ್ಕಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ