ರಿಷಬ್, ರಾಜ್ ಶೆಟ್ಟಿ ಶೆಟ್ಟಿ ‘ಗರುಡಗಮನ’ ಪ್ರೀಮಿಯರ್ ಶೋಗೆ ಭರ್ಜರಿ ಬೇಡಿಕೆ
ನವಂಬರ್ 19 ರಂದು ಚಿತ್ರ ರಿಲೀಸ್ ಆಗುತ್ತಿದ್ದು, ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲವಿದೆ.
ಚಿತ್ರತಂಡ ಈಗಾಗಲೇ ಪ್ರೀಮಿಯರ್ ಶೋ ಟಿಕೆಟ್ ಮಾರಾಟಕ್ಕಿಟ್ಟಿದ್ದು, ಇದಕ್ಕೆ ಭಾರೀ ಬೇಡಿಕೆ ಬಂದಿದೆ. ನವಂಬರ್ 18 ರಂದು ಕೆಲವು ಆಯ್ದ ಥಿಯೇಟರ್ ಗಳಲ್ಲಿ ಪ್ರೀಮಿಯರ್ ಶೋ ಇದೆ. ಇದರ ಟಿಕೆಟ್ ಗಳು ಬುಕ್ ಮೈ ಶೋನಲ್ಲಿ ಲಭ್ಯವಿದೆ. ಪ್ರೀಮಿಯರ್ ಶೋಗೆ ಬೇಡಿಕೆಯಿರುವುದನ್ನು ನೋಡಿ ಚಿತ್ರತಂಡ ಸಿನಿಮಾ ಸಕ್ಸಸ್ ಗ್ಯಾರಂಟಿ ಎಂಬ ಉತ್ಸಾಹದಲ್ಲಿದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ, ಯುಎಇನಲ್ಲೂ ಬಿಡುಗಡೆಯಾಗುತ್ತಿದೆ.