ಜ್ಯೂ.ಎನ್ ಟಿಆರ್ ಬಳಿಯಿರುವ ಐದು ದುಬಾರಿ ವಸ್ತುಗಳು!

ಶುಕ್ರವಾರ, 2 ಜೂನ್ 2023 (08:30 IST)
Photo Courtesy: Twitter
ಹೈದರಾಬಾದ್: ಜ್ಯೂ.ಎನ್ ಟಿಆರ್ ಇದೀಗ ಟಾಲಿವುಡ್ ನಲ್ಲಿ ಕೋಟಿ ಕೋಟಿ ಸಂಭಾವನೆ ಜೇಬಿಗಿಳಿಸುತ್ತಿರುವ ಬಹುಬೇಡಿಕೆಯ ನಟ.

ಸದ್ಯಕ್ಕೆ ಜ್ಯೂ.ಎನ್ ಟಿಆರ್ ಎರಡು ತೆಲುವು, ಒಂದು ಬಾಲಿವುಡ್ ಸಿನಿಮಾಗಳಲ್ಲಿ ಏಕಕಾಲಕ್ಕೆ ನಟಿಸುತ್ತಿದ್ದಾರೆ. ತಾರಕ್ ಬಳಿ ಅನೇಕ ದುಬಾರಿ ವಸ್ತುಗಳನ್ನು ಹೊಂದಿದ್ದು ಟಾಪ್ 5 ವಸ್ತುಗಳು ಯಾವುವು ನೋಡೋಣ.

ಕೋಟಿ ಬೆಲೆಬಾಳುವ ಬಂಗಲೆ ಹೊಂದಿರುವ ಜ್ಯೂ.ಎನ್ ಟಿಆರ್ ಬಳಿ 2.26 ಕೋಟಿ ರೂ. ರೇಂಜ್ ರೋವರ್ ಕಾರು ಹೊಂದಿದ್ದಾರೆ. ಇದಲ್ಲದೆ ಮತ್ತೊಂದು 92 ಲಕ್ಷ ರೂ.ಗಳ ದುಬಾರಿ ಕಾರು ಕೂಡಾ ಇದೆ. ಜ್ಯೂ.ಎನ್ ಟಿಆರ್ ತಮಗಾಗಿಯೇ ಒಂದು ಕ್ಯಾರಾವ್ಯಾನ್ ಹೊಂದಿದ್ದು ಇದರ ಬೆಲೆಯೇ 2 ಕೋಟಿ ರೂ.! ಮೋಟಾರು ಬೈಕ್ ಕ್ರೇಜ್ ಹೊಂದಿರುವ ತಾರಕ್ ಬಳಿ 14 ಲಕ್ಷ ರೂ. ಗಳ ಸುಝುಕಿ ಹಯಾಬುಝಾ ಬೈಕ್ ಇದೆ. ತಾರಕ್ ತಮ್ಮದೇ ಖಾಸಗಿ ಏರ್ ಜೆಟ್ ಹೊಂದಿದ್ದು 80 ಕೋಟಿ ಬೆಲೆ ಬಾಳುತ್ತದೆ. ಇದಲ್ಲದೆ 2 ಕೋಟಿ ರೂ.ಗಳ ರಿಸ್ಟ್ ವಾಚ್ ಕೂಡಾ ತಾರಕ್ ಬಳಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ