ಮೇಕೆ ಬಲಿಕೊಟ್ಟಿದ್ದಕ್ಕೆ ಜ್ಯೂ.ಎನ್ ಟಿಆರ್ ಫ್ಯಾನ್ಸ್ ವಿರುದ್ಧ ಕೇಸ್

ಬುಧವಾರ, 24 ಮೇ 2023 (10:39 IST)
ಹೈದರಾಬಾದ್: ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ಯಶಸ್ಸಿಗಾಗಿ ತಮಗೆ ತೋಚಿದಂತೆ ದೇವರ ಹರಕೆ ತೀರಿಸುವ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ.

ಅದೇ ರೀತಿ ಮಾಡಲು ಹೋಗಿ ಜ್ಯೂ.ಎನ್ ಟಿಆರ್ ಫ್ಯಾನ್ಸ್ ಈಗ ಕೇಸು ಜಡಿಸಿಕೊಂಡಿದ್ದಾರೆ. ತಾರಕ್ ಇತ್ತೀಚೆಗೆ 40 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಅವರ ಹುಟ್ಟುಹಬ್ಬದಂದು ಅಭಿಮಾನಿಗಳ ಗುಂಪೊಂದು ಮೇಕೆಯೊಂದನ್ನು ಕಡಿದು ಅದರ ರಕ್ತದಿಂದ ಜ್ಯೂ.ಎನ್ ಟಿಆರ್ ಕಟೌಟ್ ಗೆ ಅಭಿಷೇಕ ಮಾಡಿದ್ದರು! ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸರು ಘಟನೆಗೆ ಕಾರಣಕರ್ತರಾದ ಅಭಿಮಾನಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ