ಜ್ಯೂ.ಎನ್ ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಆರಂಭಕ್ಕೆ ಮುಹೂರ್ತ ಫಿಕ್ಸ್

ಶನಿವಾರ, 20 ಮೇ 2023 (13:54 IST)
ಹೈದರಾಬಾದ್: ಇಂದು ಜ್ಯೂ.ಎನ್ ಟಿಆರ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಹುಟ್ಟುಹಬ್ಬದ ನಿಮಿತ್ತ ಎನ್ ಟಿಆರ್30 ಸಿನಿಮಾದ ಫಸ್ಟ್ ಲುಕ್, ಟೈಟಲ್ ರಿವೀಲ್ ಆಗಿದೆ.

ಕೊರಟಾಲ ಶಿವ ನಿರ್ದೇಶಿಸುತ್ತಿರುವ ಎನ್ ಟಿಆರ್30 ಸಿನಿಮಾಗೆ ‘ದೇವರ’ ಎಂದು ಟೈಟಲ್ ಇಡಲಾಗಿದೆ. ಇದಾದ ಬಳಿಕ ಜ್ಯೂ.ಎನ್ ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಿನಿಮಾ ಸೆಟ್ಟೇರಲಿದ್ದು, ಈ ಬಗ್ಗೆಯೂ ಅಪ್ ಡೇಟ್ ಸಿಕ್ಕಿದೆ.

ಜ್ಯೂ.ಎನ್ ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಿನಿಮಾ ಮಾರ್ಚ್ 2024 ರಲ್ಲಿ ಆರಂಭವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಸಿನಿಮಾದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ