ತೀವ್ರ ಸುಸ್ತು: ನಟ ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು
ಇಂದು ಚಿಕಿತ್ಸೆ ಪಡೆದು ನಾಳೆ ಬೆಳಿಗ್ಗೆ ಮನೆಗೆ ತೆರಳಲಿದ್ದಾರೆ ಶಿವರಾಜ್ ಕುಮಾರ್. ಚಿಕಿತ್ಸೆ ನಂತರ ಶಿವರಾಜ್ ಕುಮಾರ್ ಆರಾಮಾಗಿದ್ದಾರೆ. ಯಾವುದೇ ಆತಂಕ ಪಡುವಂಥದ್ದು ಇಲ್ಲ ಎಂದಿದ್ದಾರೆ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಲೋಕಸಭೆ ಚುನಾವಣೆಯ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಪತ್ನಿ ಗೀತಾ ಪರ ಶಿವರಾಜ್‌ಕುಮಾರ್ ಪ್ರಚಾರ ಕೈಗೊಂಡಿದ್ದರು. ಚುನಾವಣೆಯಲ್ಲಿ ಪತ್ನಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಹೇಳಿ, ಈಚೆಗೆ ಶಿವಮೊಗ್ಗದಲ್ಲಿ ದಂಪತಿ ಸಮೇತ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.