16 ವರ್ಷಗಳ ಸ್ನೇಹಿತನ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಾಯಕಿ ಸುಹಾನಾ ಸಯ್ಯದ್

Sampriya

ಸೋಮವಾರ, 22 ಸೆಪ್ಟಂಬರ್ 2025 (16:05 IST)
Photo Credit X
ಸರಿಗಮಪ ರಿಯಾಲಿಟಿ ಶೋ ಮೂಲಕ ಭಾರೀ ಕನ್ನಡಿಗರ ಮನಗೆದ್ದಿರುವ ಗಾಯಕಿ ಸುಹಾನಾ ಸಯ್ಯದ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 

ತಾನು ಪ್ರೀತಿಸಿ, ಮದುವೆಯಾಗಲಿರುವ ಹುಡುಗನ ಫೋಟೋವನ್ನು ಗಾಯಕಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 

ನೀನಾಂಸ ಕಲಾವಿದ ನಿತಿನ್ ಶಿವಾಂಶ್ ಜತೆ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಸುಹಾನಾ ಅವರು ಹೇಳಿಕೊಂಡಿದ್ದಾರೆ. 

ಇನ್ನೂ ಈ ಹಿಂದೆ ರಿಯಾಲಿಟಿ ಶೋನಲ್ಲಿ ಹಿಂದೂ ದೇವರ ಭಜನೆ ಹಾಡಿದ ವಿಚಾರವಾಗಿ ಗಾಯಗಿ ವಿವಾದಕ್ಕೀಡಾಗಿದ್ದರು. ಶಿವಮೊಗ್ಗದ ಸಾಗರದವರಾಗಿರುವ ಸುಹಾನಾ ಅವರು ತಮ್ಮ ಗಾಯನ ಮೂಲಕನೇ ಖ್ಯಾತಿ ಗಳಿಸಿದ್ದಾರೆ. 

ನಿತಿನ್ ಶಿವಾಂಶ್ ಜೊತೆ ಪ್ರೀತಿಯ ಗುಟ್ಟನ್ನ ರಟ್ಟು ಮಾಡಿರುವ ಸುಹಾನಾ ಸಯ್ಯದ್, ತಾವು ಈ ಪ್ರೀತಿಯಲ್ಲಿ ಎದುರಿಸಿದ ಸವಾಲಿನ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ರಂಗಭೂಮಿ ಕಲಾವಿದ ಆಗಿರುವ ನಿತಿನ್ ಶಿವಾಂಶ್ ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ. ಶಾಲಾ ದಿನಗಳಲ್ಲೇ ನಿತಿನ್ ಶಿವಾಂಶ್ ಪರಿಚಯ ಇರೋದಾಗಿ ಸುಹಾನಾ ಹೇಳಿಕೊಂಡಿದ್ದಾರೆ. 

16 ವರ್ಷಗಳ ಸ್ನೇಹ ಪ್ರೀತಿಯಾಗಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡದಲು ಸಜ್ಜಾಗಿದ್ದಾರೆ.   ಪ್ರೇಮಿಗಳು ಸಮಾಜದ ಮುಂದೆ ಬಲವಾಗಿ ಎದ್ದು ನಿಂತು ತಮ್ಮ ಪ್ರೀತಿಯ ವಿಚಾರ ಘೋಷಿಸಿದ್ದಾರೆ. ಪ್ರೀತಿಯ ಗುಟ್ಟನ್ನ ನಿಮ್ಮ ಮುಂದೆ ತೆರೆದಿಡುತ್ತೇವೆ ಎಂದು ಘೋಷಿಸಿದ ಸುಹಾನಾ ಸಯ್ಯದ್ ಜೋಡಿ ಫೋಟೋ ಹಂಚಿಕೊಂಡಿದ್ದಾರೆ. 

ಇನ್ನೂ ಮದುವೆ ಯಾವಾಗ ಎಂಬ ವಿಚಾರವನ್ನು ಗಾಯಕಿ ಹಂಚಿಕೊಂಡಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ