ನಾಲ್ಕೈದು ಘಟನೆಯಲ್ಲಿ ನಾನು ಹೋಗಿಯೇ ಬಿಡ್ತಾ ಇದ್ದೆ, ರಿಷಭ್ ಶೆಟ್ಟಿ

Sampriya

ಸೋಮವಾರ, 22 ಸೆಪ್ಟಂಬರ್ 2025 (20:45 IST)
Photo Credit X
ಬೆಂಗಳೂರು: ಆ ದೈವದ ದಯೆಯಿಂದಲೇ ನಾನು ನಾಲ್ಕು ಬಾರಿ ಆಗಬೇಕಿದ್ದ ಅವಘಡದಿಂದ ಪಾರಾಗಿದ್ದೇನೆ ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ್ದಾರೆ. 

ಕಾಂತಾರ ಸಿನಿಮಾ ಸೆಟ್‌ನಲ್ಲಿ ನಡೆದಿದೆ ಎನ್ನಲಾದ ಅವಘಡಗಳ ವದಂತಿ ಬಗ್ಗೆ ರಿಷಭ್ ಶೆಟ್ಟಿ ಅವರು ಇಂದು ಟ್ರೈಲರ್ ಲಾಂಚ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.  

ಕಾಂತಾರ ಮಾಡಲು ಶುರುಮಾಡಿದಾಗ ಸಿನಿಮಾ ಸೆಟ್‌ನಲ್ಲಿ ಅವಘಡಗಳಾಯಿತು ಎಂಬ ಸುದ್ದಿಗಳನ್ನು ಕೇಳುತ್ತಿದ್ದೆ.  ಲೆಕ್ಕ ಹಾಕಿದ್ರೆ ಒಂದು ನಾಲ್ಕೈದು ಬಾರಿ ನಾನು ಹೋಗಿಯೇ ಬಿಡ್ತಾ ಇದ್ದೆ. ಆದರೆ ದೈವದ ಅನುಗ್ರಹದಿಂದ ಏನೂ ಆಗಿಲ್ಲ ಎನ್ನುವ ಮೂಲಕ ಕಾಂತಾರ ಸೆಟ್ ಸುತ್ತಾ ಹಬ್ಬಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದರು. 

ಸಿನಿಮಾವನ್ನು ತನ್ನ ಹೆಗಲಿಗೆ ಹಾಕಿಕೊಂಡು ಇದುವರೆಗೂ ಬಂದಿದ್ದೇನೆ. ಇದೆಲ್ಲಾ ದೈವದ ಕಾರ್ಣಿಕದಿಂದಾಗಿದೆ. ಅದರಿಂದಾಗಿ ಇದೀಗ ಎರಡನೇಯದಾಗಿ ಸಿನಿಮಾವನ್ನು ತೋರಿಸುತ್ತೇನೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ