ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಎಸ್.ಕೆ.ಕೃಷ್ಣಕಾಂತ್ ನಿಧನ
ಶುಕ್ರವಾರ, 2 ಅಕ್ಟೋಬರ್ 2020 (13:24 IST)
ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಎಸ್.ಕೆ.ಕೃಷ್ಣಕಾಂತ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇವರಿಗೆ 52 ವರ್ಷ ವಯಸ್ಸಾಗಿದ್ದು , ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೆಪ್ಟಂಬರ್ 30ರಂದು ರಾತ್ರಿ ಹೃದಯಾಘಾಯದಿಂದ ನಿಧನರಾಗಿದ್ದಾರೆ.
ಇವರು ತಿರುಡಾ-ತಿರುಡಿ, ಕಿಂಗ್, ಮನ್ಮಥನ್, ಮುಂತಾದ ಸ್ಟಾರ್ ನಟರ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇವರ ನಿಧನಕ್ಕೆ ಕಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ.