ಐಪಿಎಲ್ 13: ಹೈದರಾಬಾದ್ ವಿರುದ್ಧ ಗೆಲುವಿನ ಕನಸಿನಲ್ಲಿ ಸಿಎಸ್ ಕೆ
ಶುಕ್ರವಾರ, 2 ಅಕ್ಟೋಬರ್ 2020 (10:59 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದ್ದು, ಸಿಎಸ್ ಕೆಗೆ ಸೋಲಿನ ಸುಳಿಯಿಂದ ಹೊರಬರುವ ತವಕವಿದೆ.
ಮೂರು ಪಂದ್ಯಗಳ ಪೈಕಿ ಕಳೆದ ಎರಡೂ ಪಂದ್ಯಗಳನ್ನು ಸತತವಾಗಿ ಸೋತಿರುವ ಚೆನ್ನೈ ಇಂದು ಗೆಲ್ಲುವ ಒತ್ತಡದಲ್ಲಿದೆ. ತಂಡಕ್ಕೆ ಅಂಬಟಿ ರಾಯುಡು, ಬ್ರಾವೋ ಪುನರಾಗಮನವಾಗಿರುವುದು ಅದಕ್ಕೆ ಬಲ ತುಂಬಿದೆ. ಇನ್ನೊಂದೆಡೆ ಹೈದರಾಬಾದ್ ಕಳೆದ ಪಂದ್ಯದಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿದೆ. ಮತ್ತೊಮ್ಮೆ ಅಂತಹದ್ದೇ ಅದ್ಭುತ ಪ್ರದರ್ಶನ ನೀಡಿ ಗೆಲುವಿ ಸರಣಿ ಮುಂದುವರಿಸುವ ವಿಶ್ವಾಸವಿದೆ. ಅಂತಿಮ ಯಶಸ್ಸು ಯಾರದ್ದು ಎಂದು ಕಾದು ನೋಡಬೇಕಿದೆ. ಪಂದ್ಯ ಎಂದಿನಂತೆ ಸಂಜೆ 7.30 ಕ್ಕೆ ಆರಂಭವಾಗಲಿದೆ.