ನಟ ದರ್ಶನ್ ತಪ್ಪು ತಿದ್ದಿದ ಫ್ಯಾನ್ಸ್
ಆದರೆ ಮುಂದಿನ ಹಾಡು ರಿಲೀಸ್ ಯಾವಾಗ ಎಂದು ಮಾಹಿತಿ ನೀಡುವಾಗ ದರ್ಶನ್ ಒಂದು ತಪ್ಪು ಮಾಡಿದ್ದರು. ಅದನ್ನು ಗುರುತಿಸಿದ ಫ್ಯಾನ್ಸ್ ಕೂಡಲೇ ತಪ್ಪು ತಿದ್ದಿದ್ದಾರೆ.
ಕಾಟೇರ ಸಿನಿಮಾದ ಎರಡನೇ ಹಾಡು ‘ಯಾವ ಜನುಮದ ಗೆಳತಿ’ ಡಿಸೆಂಬರ್ 11 ರಂದು ಮಧ‍್ಯಾಹ್ನ 12.30 ಕ್ಕೆ ಬಿಡುಗಡೆಯಾಗುತ್ತಿದೆ. ಈ ವಿಚಾರವನ್ನು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ್ದರು.
ಆದರೆ ಡಿಸೆಂಬರ್ 11 ರ ಬದಲು ಆಗಸ್ಟ್ 11 ರಂದು ತಪ್ಪಾಗಿ ದಿನಾಂಕ ಬರೆದಿದ್ದರು. ಇದನ್ನು ನೋಡಿ ನೆಟ್ಟಿಗರಿಗೆ ಕನ್ ಫ್ಯೂಸ್ ಆಗಿತ್ತು. ಹಲವರು ಕಾಮೆಂಟ್ ಮಾಡಿ ‘ಬಾಸ್ ದಯವಿಟ್ಟು ದಿನಾಂಕ ಸರಿಪಡಿಸಿ, ತಪ್ಪಾಗಿದೆ’ ಎಂದು ಸೂಚನೆ ಕೊಟ್ಟರು. ಅಭಿಮಾನಿಗಳು ಸೂಚನೆ ನೀಡಿದ ತಕ್ಷಣ ಎಚ್ಚೆತ್ತುಕೊಂಡ ದರ್ಶನ್ ದಿನಾಂಕ ಸರಿಪಡಿಸಿದರು.