ಕಾಟೇರ ಸ್ಯಾಟ್ ಲೈಟ್, ಡಿಜಿಟಲ್ ರೈಟ್ಸ್ ಗೆ ಭಾರೀ ಡಿಮ್ಯಾಂಡ್

ಶನಿವಾರ, 2 ಡಿಸೆಂಬರ್ 2023 (09:00 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಸ್ಯಾಟ್ ಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಗೆ ಭಾರೀ ಬೇಡಿಕೆ ಬಂದಿದೆ.

ದರ್ಶನ್ ಸಿನಿಮಾಗಳೆಂದರೆ ಅದನ್ನು ಹುಚ್ಚೆದ್ದು ವೀಕ್ಷಿಸುವ ಪ್ರೇಕ್ಷಕ ವರ್ಗವೇ ಇದೆ. ಹೀಗಾಗಿ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯಲಾಗುತ್ತದೆ. ಇದೀಗ ಕಾಟೇರ ಸಿನಿಮಾಗೂ ಭಾರೀ ಬೇಡಿಕೆಯಿದೆ.

ಡಿಸೆಂಬರ್ 29 ರಂದು ಕಾಟೇರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕಿಂತ ಮೊದಲು ಚಿತ್ರದ ಡಿಜಿಟಲ್ ಮತ್ತು ಸ್ಯಾಟ್ ಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಬಿಕರಿಯಾಗಿದೆ ಎಂದು ತಿಳಿದುಬಂದಿದೆ.

ಕಾಟೇರ ಸಿನಿಮಾದ ಒಟಿಟಿ ಹಕ್ಕುಗಳನ್ನು ಜೀ5 ಆಪ್ ಖರೀದಿಸಿದೆ. ಜೀ ಕನ್ನಡ ವಾಹಿನಿ ಸ್ಯಾಟ್ ಲೈಟ್ ಹಕ್ಕುಗಳನ್ನು ಪಡೆದುಕೊಂಡಿದೆ. ಹೀಗಾಗಿ ಮುಂದಿನ ಸಂಕ್ರಾಂತಿ ವೇಳೆಗೆ ಒಟಿಟಿ ಮತ್ತು ಟಿವಿಯಲ್ಲಿ ಕಾಟೇರ ಪ್ರಸಾಠವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ