ಚಾರ್ಲಿ 777 ಸಿನಿಮಾಗೆ ಯು/ಎ ಸರ್ಟಿಫಿಕೇಟ್ ನೀಡಿದ್ದು ತಪ್ಪಾಯ್ತೇ?!

ಶುಕ್ರವಾರ, 28 ಜನವರಿ 2022 (09:30 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ‘ಚಾರ್ಲಿ 777’ ಸಿನಿಮಾಗೆ ಇತ್ತೀಚೆಗೆ ಸೆನ್ಸಾರ್ ಯು/ಎ ಸರ್ಟಿಫಿಕೇಟ್ ನೀಡಿದೆ. ಆದರೆ ಕೆಲವು ಅಭಿಮಾನಿಗಳು ಇದನ್ನು ಆಕ್ಷೇಪಿಸಿದ್ದಾರೆ.

ಚಾರ್ಲಿ 777 ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿಯೂ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಈ ಸಿನಿಮಾ ಮಕ್ಕಳಿಗೂ ಇಷ್ಟವಾಗುವಂತಿದೆ. ಹೀಗಾಗಿ ಈ ಸಿನಿಮಾಗೆ ಕೇವಲ ಯೂನಿವರ್ಸಲ್ ಸರ್ಟಿಫಿಕೇಟ್ ನೀಡಬೇಕಿತ್ತು ಎಂಬುದು ಕೆಲವರ ಅಭಿಪ್ರಾಯ.

ಆದರೆ ಸಿನಿಮಾಗೆ ಯೂನಿವರ್ಸಲ್ ಜೊತೆಗೆ ಅಡಲ್ಟ್ ಎಂದು ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಅದೇನೇ ಇದ್ದರೂ ನಮ್ಮ ಜೊತೆಗೆ ಮಕ್ಕಳೂ ಸಿನಿಮಾ ನೋಡುವುದು ಗ್ಯಾರಂಟಿ ಎಂದಿದ್ದಾರೆ ಅಭಿಮಾನಿಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ