ಯಶ್-ರಾಧಿಕಾ ಪಂಡಿತ್ ಶೀಘ್ರದಲ್ಲೇ ಕೊಡಲಿದ್ದಾರಾ ಗುಡ್ ನ್ಯೂಸ್?!
ರಾಧಿಕಾ ಸಹೋದರನ ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡು ಮುದ್ದು ಮಾಡುತ್ತಿರುವ ಫೋಟೋ ಹಾಕಿಕೊಂಡಿದ್ದರು. ಇದರ ಬೆನ್ನಲ್ಲೇ ಯಶ್ ಮಗುವನ್ನು ಎತ್ತಿ ಮುದ್ದಾಡುತ್ತಿರುವ ಫೋಟೋವನ್ನು ರಾಧಿಕಾ ಪ್ರಕಟಿಸಿದ್ದಾರೆ.
ಈ ಎರಡೂ ಫೋಟೋಗಳಿಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಗಳಲ್ಲಿ ಹೆಚ್ಚಿನವರದ್ದು ಒಂದೇ ಆಸೆ. ಅಣ್ಣಾ-ಅತ್ತಿಗೆ ನಿಮ್ಮ ಕಡೆಯಿಂದ ಗುಡ್ ನ್ಯೂಸ್ ಯಾವಾಗ? ಜ್ಯೂನಿಯರ್ ಯಶ್ ಅಥವಾ ಜ್ಯೂನಿಯರ್ ರಾಧಿಕಾ ಯಾವಾಗ ಬರ್ತಾರೆ? ಸದ್ಯಕ್ಕೆ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ. ಹಾಗಿದ್ದರೂ ಅಭಿಮಾನಿಗಳಿಗೆ ಮಾತ್ರ ಇವರ ಕಡೆಯಿಂದ ಸಿಹಿ ಸುದ್ದಿ ಕೇಳುವಾಸೆ!