ಅಭಿಮಾನಿಗಳ ಆಸೆ ನೆರವೇರಿಸ್ತಾರಾ ರಶ್ಮಿಕಾ ಮಂದಣ್ಣ?!

ಸೋಮವಾರ, 24 ಜೂನ್ 2019 (10:03 IST)
ಬೆಂಗಳೂರು: ರಶ್ಮಿಕಾ ಮಂದಣ್ಣ ಅಪ್ಪಟ ಕನ್ನಡದ ಹುಡುಗಿ ಈಗ ತೆಲುಗು, ತಮಿಳಿನಲ್ಲೂ ಸದ್ದು ಮಾಡುತ್ತಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ಸಮಯದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ರಶ್ಮಿಕಾ.


ಒಂದು ರೀತಿಯಲ್ಲಿ ನಾಯಕರಿಗೆ ಅದೃಷ್ಟದ ನಾಯಕಿ ಎಂದೇ ಗುರುತಿಸಿಕೊಂಡಿರುವ ರಶ್ಮಿಕಾ ಈಗ ತಮಿಳಿನಲ್ಲಿ ಕಾರ್ತಿ ಜತೆ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಸೂಪರ್ ಸ್ಟಾರ್ ಗಳಿಗೆ ನಾಯಕಿಯಾಗಿದ್ದಾರೆ.

ಈಗ ತಮಿಳು ಇಳಯದಳಪತಿ ವಿಜಯ್ ಗೆ ರಶ್ಮಿಕಾ ನಾಯಕಿಯಾಗಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆ ಸುದ್ದಿ ಬೇಗ ಬರಲಿ ಎಂದು ಆಶಿಸುತ್ತಿದ್ದಾರೆ. ನಿನ್ನೆ ವಿಜಯ್ ಹುಟ್ಟುಹಬ್ಬದಂದು ರಶ್ಮಿಕಾ ಶುಭ ಕೋರಿದ್ದಾರೆ. ಈ ಟ್ವೀಟ್ ನೋಡಿ ಅಭಿಮಾನಿಗಳು ರಶ್ಮಿಕಾಗೆ ಬೇಗ ವಿಜಯ್ ಜತೆ ನಿಮ್ಮನ್ನು ನೋಡುವ ನಮ್ಮ ಆಸೆ ನೆರವೇರಿಸಿ ಎಂದು ಕೇಳಿಕೊಂಡಿದ್ದಾರೆ. ಅಭಿಮಾನಿಗಳ ಕನಸು ಈಡೇರುತ್ತಾ? ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ