ಪ್ರಭಾಸ್ ಕೆನ್ನೆಗೆ ಬಾರಿಸಿದ ಮಹಿಳಾ ಅಭಿಮಾನಿ!
ಪ್ರಭಾಸ್ ಎಲ್ಲೇ ಹೋದರೂ ಅಭಿಮಾನಿಗಳು ಸೆಲ್ಫೀಗಾಗಿ ಮುತ್ತಿಕೊಳ್ಳುತ್ತಾರೆ. ಅದರಲ್ಲೂ ಪ್ರಭಾಸ್ ಗೆ ಮಹಿಳಾ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಇದೀಗ ಅಂತಹದ್ದೇ ಹುಚ್ಚು ಅಭಿಮಾನಿಯೊಬ್ಬರು ಮಾಡಿದ ಕೆಲಸ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳಾ ಅಭಿಮಾನಿಯೊಬ್ಬರು ವಿಮಾನ ನಿಲ್ದಾಣದಲ್ಲಿ ಪ್ರಭಾಸ್ ಸಿಕ್ಕಾಗ ಆದ ಖುಷಿಗೆ ಸೆಲ್ಫೀ ತೆಗೆಸಿಕೊಂಡಿದ್ದು, ಅದಾದ ಬಳಿಕ ಕೆನ್ನೆಗೆ ಬಾರಿಸಿ ಓಡಿದ್ದಾರೆ. ಆದರೆ ಇದೆಲ್ಲವನ್ನೂ ಮಾಡಿದ್ದು ಪ್ರಭಾಸ್ ಮೇಲಿನ ಪ್ರೀತಿಗೆ. ಆದರೆ ಮಹಿಳಾ ಅಭಿಮಾನಿಯ ಹುಚ್ಚು ಅಭಿಮಾನಕ್ಕೆ ಪ್ರಭಾಸ್ ಕೊಂಚ ಗಲಿಬಿಲಿಯಾದರು.