ದಳಪತಿ ವಿಜಯ್ ಲಿಯೋ ಸಿನಿಮಾಗೆ ಕರ್ನಾಟಕದಲ್ಲಿ ಅಡ್ಡಿ ಆತಂಕ
ತಮಿಳು ಸಿನಿಮಾ ಚಿಕ್ಕು ಪ್ರಮೋಷನ್ ಗೆ ಕನ್ನಡ ಸಂಘಟನೆಗಳು ಅಡ್ಡಿಪಡಿಸಿದ ಬೆನ್ನಲ್ಲೇ ತಮಿಳು ಸಂಘಟನೆಯೂ ಕನ್ನಡ ಸಿನಿಮಾಗಳಿಗೆ ತಮಿಳುನಾಡಿನಲ್ಲಿ ಅಡ್ಡಿಪಡಿಸುವ ಬೆದರಿಕೆ ಹಾಕಿತ್ತು.
ಅಕ್ಟೋಬರ್ 19 ರಂದು ಕನ್ನಡದ ಘೋಸ್ಟ್ ಮತ್ತು ತಮಿಳಿನ ಲಿಯೋ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಎರಡೂ ಸಿನಿಮಾಗಳಿಗೆ ಈಗ ಎರಡೂ ರಾಜ್ಯಗಳ ಸಂಘಟನೆಗಳಿಂದ ಪ್ರತಿರೋಧ ಎದುರಾಗುವ ಆತಂಕ ಎದುರಾಗಿದೆ. ಲಿಯೋ ಸಿನಿಮಾ ಪ್ರಮೋಷನ್, ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳು ತಡೆ ಒಡ್ಡುವ ಆತಂಕ ಎದುರಾಗಿದೆ. ಬೆಂಗಳೂರಿನಲ್ಲಿ ದಳಪತಿ ವಿಜಯ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳನ್ನು ನೋಡುವವರ ಸಂಖ್ಯೆ ಸಾಕಷ್ಟಿದೆ. ಹೀಗಾಗಿ ಇಲ್ಲಿ ಲಿಯೋ ಬಿಡುಗಡೆಗೆ ಅಡ್ಡಿಪಡಿಸಿದರೆ ಚಿತ್ರತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.