ಏಪ್ರಿಲ್ ನಲ್ಲಿ ಬಿಗ್ ಸಿನಿಮಾಗಳ ಸಾಲು
ತ್ರಿಬಲ್ ಆರ್, ಕೆಜಿಎಫ್ 2, ಬೀಸ್ಟ್, ಜೇಮ್ಸ್ ಸೇರಿದಂತೆ ಬಹುತೇಕ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಅದರಲ್ಲೂ ಈ ಏಪ್ರಿಲ್ ತಿಂಗಳಂತೂ ಬಿಗ್ ಬಜೆಟ್ ಸಿನಿಮಾಗಳೇ ಬಿಡುಗಡೆಯಾಗುತ್ತಿವೆ.
ಕೆಜಿಎಫ್ 2, ಬೀಸ್ಟ್, ಲಾಲ್ ಸಿಂಗ್ ಛಡ್ಡಾ ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆಯಾಗುವುದಾಗಿ ದಿನಾಂಕ ಘೋಷಿಸಿದೆ. ಇದರ ಜೊತೆಗೆ ಇನ್ನಷ್ಟು ಸಿನಿಮಾಗಳು ರಿಲೀಸ್ ಡೇಟ್ ಘೋಷಿಸಬಹುದು. ಈ ತಿಂಗಳಲ್ಲಿ ಬೇಸಿಗೆ ರಜೆ, ಕೊರೋನಾವೂ ನಿಯಂತ್ರಣಕ್ಕೆ ಬಂದಿರುತ್ತದೆ. ಹೀಗಾಗಿ ಬಹುತೇಕ ಮಂದಿ ಇದೇ ತಿಂಗಳನ್ನೇ ರಿಲೀಸ್ ಗೆ ಸೂಕ್ತ ದಿನವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.