ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಟಾರ್ ನಟ-ನಟಿಯರ ಲಿಸ್ಟ್

ಮಂಗಳವಾರ, 29 ಡಿಸೆಂಬರ್ 2020 (10:21 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಸಿನಿಮಾ ಉದ್ಯಮ ಸಂಕಷ್ಟದಲ್ಲಿತ್ತು. ಈಗಷ್ಟೇ ಚೇತರಿಕೆಯ ಹಾದಿಯಲ್ಲಿದೆ. ಈ ನಡುವೆ ಸಿನಿಮಾದಲ್ಲಿ ಮಿಂಚುತ್ತಿದ್ದ ನಟ-ನಟಿಯರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಲೇಟೆಸ್ಟ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಸಿನಿಮಾ ನಟರ ಲಿಸ್ಟ್ ಇಲ್ಲಿದೆ ನೋಡಿ.


ಒಂದು ಕಾಲದಲ್ಲಿ ಕಿರುತೆರೆಯಲ್ಲಿ ನಟಿಸುವುದು ಎಂದರೆ ಕಿರು ಪರದೆ ಎಂಬ ಕೀಳರಿಮೆಯಿತ್ತು. ಆದರೆ ಈಗ ಕಿರುತೆರೆಯ ಕಾರ್ಯಕ್ರಮಗಳೂ ಯಾವ ಸಿನಿಮಾಗೂ ಕಮ್ಮಿಯಿಲ್ಲದಂತೆ ಜನಪ್ರಿಯವಾಗಿದೆ. ಹೀಗಾಗಿ ಸಿನಿಮಾದಲ್ಲಿ ನಟಿಸುತ್ತಿದ್ದ ಕಲಾವಿದರು ಕಿರುತೆರೆಗೂ ಎಂಟ್ರಿ ಕೊಡುತ್ತಿದ್ದಾರೆ. ಒಂದು ಕಾಲದಲ್ಲಿ ಬೆಳ್ಳಿ ತೆರೆಯ ಸ್ಪುರದ್ರೂಪಿ ನಾಯಕ ಎನಿಸಿಕೊಂಡಿದ್ದ ಅಭಿಜಿತ್ ಈಗ ಎರಡೆರಡು ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅದೂ ಅಪ್ಪನ ಪಾತ್ರದಲ್ಲಿ. ಟಿಆರ್ ಪಿಯಲ್ಲಿ ನಂ.1 ಸ್ಥಾನದಲ್ಲಿರುವ ಸತ್ಯ ಧಾರವಾಹಿಯಲ್ಲಿ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಕೆಲ ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡರು. ಈ ಧಾರವಾಹಿಯಲ್ಲಿ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದ ನಟ ಶ್ರೀನಿವಾಸಮೂರ್ತಿ ತಂದೆಯ ಪಾತ್ರ ಮಾಡುತ್ತಿದ್ದಾರೆ. ಇದೀಗ ಜೊತೆ ಜೊತೆಯಲಿ ಧಾರವಾಹಿ ಮೂಲಕ ಒಂದು ಕಾಲದ ಮೋಸ್ಟ್ ವಾಂಟೆಡ್ ಹೀರೋಯಿನ್ ಆಗಿದ್ದ ಸುಧಾರಾಣಿ ಎಂಟ್ರಿ ಕೊಡುತ್ತಿದ್ದಾರೆ. ಇದೇ ಧಾರವಾಹಿಯಲ್ಲಿ ನಿರ್ದೇಶಕಿ, ನಟಿ ವಿಜಯಲಕ್ಷ್ಮಿ ಸಿಂಗ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹೀಗೆ, ಈಗ ಕಿರುತೆರೆ ಲೋಕದಲ್ಲಿ ಸಿನಿಮಾ ತಾರೆಯರದ್ದೇ ಹವಾ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ