ಮಲ್ಟಿಪ್ಲೆಕ್ಸ್`ಗಳಲ್ಲಿ 200 ರೂ. ಟಿಕೆಟ್ ದರ ನಿಗದಿ: ಸರ್ಕಾರದಿಂದ ಕೊನೆಗೂ ಅಧಿಸೂಚನೆ ಜಾರಿ

ಮಂಗಳವಾರ, 2 ಮೇ 2017 (18:46 IST)
ಅಳೆದು ತೂಗಿ ರಾಜ್ಯ ಸರ್ಕಾರ ಕೊನೆಗೂ ಟಿಕೆಟ್ ದರ ಗರಿಷ್ಠ 200 ರೂ.ಗೆ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಅಧಿಸೂಚನೆ ಇವತ್ತು ಜಾರಿಯಾಗಿದೆ.
 

ಬಜೆಟ್`ನಲ್ಲೇ ಗರಿಷ್ಠ  ಟಿಕೆಟ್ ದರ 200 ರೂ.ಗೆ ನಿಗದಿ ಮಾಡಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ, ಆದೇಶ ಮಾತ್ರ ಜಾರಿಯಾಗಿರಲಿಲ್ಲ. ಈ ಬಗ್ಗೆ ಹಲವು ಟೀಕೆಗಳೂ ಕೇಳಿಬಂದಿದ್ದವು. ಈ ಮಧ್ಯೆ ನಿನ್ನೆ ದುಬೈನಿಂದ ಆಗಮಿಸಿದ ಸಿದ್ದರಾಮಯ್ಯ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದಾರೆ ಎಂಬ ವಿವಾದವೂ ಹರಡಿತ್ತು.

ಈ ಮಧ್ಯೆ, ಇಂದು ಸರ್ಕಾರದಿಂದ ಅಧಿಸೂಚನೆ ಹೊರ ಬಿದ್ದಿದೆ. ಮಲ್ಟಿಪ್ಲೆಕ್ಸ್`ಗಳಿಗೆ ಮಾತ್ರವಲ್ಲ ಎಲ್ಲ ಚಿತ್ರಮಂದಿರಗಳಿಗೂ ಈ ನಿಯಮ ಅನ್ವಯವಾಗಲಿದೆ. ಗೋಲ್ಡ್ ಸ್ಕ್ರೀನ್ ಮತ್ತು ಗೋಲ್ಡ್ ಕ್ಲಾಸ್`ಗೆ ಮಾತ್ರ ೀ ನಿಯಮ ಅನ್ವಯವಾಗುದಿಲ್ಲ.
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ