ದಸರಾ ಹಬ್ಬಕ್ಕೆ ವಿಶ್ ಮಾಡಿ ಟ್ರೋಲ್ ಗೊಳಗಾದ ಕಿಚ್ಚ ಸುದೀಪ್

ಭಾನುವಾರ, 25 ಅಕ್ಟೋಬರ್ 2020 (09:25 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ದಸರಾ ಹಬ್ಬಕ್ಕೆ ಶುಭಾಷಯ ಕೋರಿ ಟ್ರೋಲ್ ಗೊಳಗಾಗಿದ್ದಾರೆ.


ಕಿಚ್ಚ ದಸರಾ ಹಬ್ಬಕ್ಕೆ ಸಲ್ಮಾನ್ ಖಾನ್ ಮತ್ತು ತಾವು ನಟಿಸಿರುವ ದಬಾಂಗ್ 2 ಸಿನಿಮಾ ಜೀ ಸಿನಿಮಾದಲ್ಲಿ ಪ್ರೀಮಿಯರ್ ಶೋ ಕಾಣಲಿದೆ ಎಂದು ಪ್ರಕಟಿಸಿದ್ದರು. ಆದರೆ ದಸರಾ ಎಂದು ಬರೆಯುವ ಬದಲು ಹಿಂದಿಯವರಂತೆ ‘Dussehra’ ಎಂದು ಬರೆದಿದ್ದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ನೀವು ಕನ್ನಡಿಗರಾಗಿ ಇಂಗ್ಲಿಷ್ ನಲ್ಲಿ ವಿಶ್ ಮಾಡಿದ್ದಲ್ಲದೆ, ದಸರಾ ಸ್ಪೆಲ್ಲಿಂಗ್ ಕೂಡಾ ಹಿಂದಿಯವರಂತೆ ಬರೆದಿದ್ದೀರಲ್ಲಾ ಎಂದು ಹಲವರು ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ