ನಾಯಕಿಯ ಹುಡುಕಾಟದಲ್ಲಿರುವ ‘ಉಪಾಧ್ಯಕ್ಷ’ ಚಿಕ್ಕಣ್ಣ

ಶನಿವಾರ, 24 ಅಕ್ಟೋಬರ್ 2020 (12:17 IST)
ಬೆಂಗಳೂರು: ಹಾಸ್ಯ ನಟ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ ‘ಉಪಾಧ್ಯಕ್ಷ’ ಮೊನ್ನೆಯಷ್ಟೇ ಸೆಟ್ಟೇರಿದೆ. ಈ ಸಿನಿಮಾಗೆ ಈಗ ನಾಯಕಿಯ ಹುಡುಕಾಟ ನಡೆದಿದೆ.


ಚಿಕ್ಕಣ್ಣನಿಗೆ ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆಸಿರುವ ಚಿತ್ರತಂಡ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಆಡಿಷನ್ ಕರೆದಿದೆ. ಆಸಕ್ತರು ಇತ್ತೀಚೆಗಿನ ಭಾವಚಿತ್ರ ಮತ್ತು ವಿಡಿಯೋ ತುಣುಕಿನೊಂದಿಗೆ ಎಂಬ ಈಮೇಲ್ ಅಥವಾ 9110262644 ಕ್ಕೆ ವ್ಯಾಟ್ಸಪ್ ಮಾಡಬಹುದು. ಉಮಾಪತಿ ಗೌಡ ನಿರ್ಮಾಣದ, ಚಂದ್ರಮೋಹನ್ ನಿರ್ದೇಶನದ ಸಿನಿಮಾ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ