ಬಿಲ್ ಗೇಟ್ಸ್ ನಿರ್ದೇಶಕನ ಬೆನ್ನಿಗೆ ನಿಂತ ಸ್ನೇಹಿತರು..!!

ಸೋಮವಾರ, 3 ಫೆಬ್ರವರಿ 2020 (15:19 IST)
ಗಾಂದೀನಗರಕ್ಕೆ ಬಂದು ಒಂದು ಸಿನಿಮಾ ನಿರ್ದೇಶನ ಮಾಡೋದು ಅಂದ್ರೆ ಅದು ಸುಲಭದಮಾತಲ್ಲ. ಅದ್ರಲ್ಲೂ ಹೊಸಬರು ಕಥೆ ಮಾಡಿಕೊಂಡು ಬಂದ್ರೆ ಅಷ್ಟು ಸುಲಭವಾಗಿ ನಿರ್ಮಾಪಕರು ಸಿಕ್ಕೋದಿಲ್ಲ.ಆದ್ರೆ ಬಿಲ್ ಗೇಟ್ಸ್ ಚಿತ್ರದ ನಿರ್ದೇಶಕ ಶ್ರೀನಿವಾಸ ಸಿ ಅದನ್ನು ಸಾಧ್ಯ ಮಾಡಿದ್ದಾರೆ. ಸಾಧ್ಯವಾಗಿಸಿದ್ದು ಅವ್ರ ಸ್ನೇಹಿತರು ಅನ್ನೋದು ಅಷ್ಟೇ ಸತ್ಯ.
ಕಾಮಿಡಿ ಕಿಂಗ್ ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಅಭಿನಯದ ಬಿಲ್ ಗೇಟ್ಸ್ಚಿತ್ರ ಚಿತ್ರದ ಸ್ಯಾಂಪಲ್ಗಳಿಂದ ತುಂಬಾ ಕುತೂಹಲ ಹುಟ್ಟಿಸಿದೆ. ಈ ಚಿತ್ರದ ನಿರ್ದೇಶಕ ಮಂಡ್ಯ ಹೈದಶ್ರೀನಿವಾಸ್.ಸಿ. ವಿಡಿಯೋ ಎಡಿಟರ್ ಆಗಿ ಚಿತ್ರರಂಗದಲ್ಲಿ ಆರಂಭದ ದಿನಗಳಲ್ಲಿ ದುಡಿದ ಶ್ರೀನಿವಾಸ್ನಂತರ ಕೋ ಡೈರೆಕಟ್ಟರ್ ಆಗಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವಿಕ್ಟರಿ, ಕ್ವಾಟ್ಲೇ ಸತೀಶ ಹೀಗೆ ಹಲವುಸಿನಿಮಾಗಳಿಗೆ ದುಡಿದಿದ್ದಾರೆ. ಸುಮಾರು ಹದಿನಾಲ್ಕು ವರ್ಷ ಚಿತ್ರರಂಗದಲ್ಲಿ ದುಡಿದು ಚಿತ್ರರಂಗದ ಆಳ ಅಂತರಾಳ ತಿಳಿದಿರುವ ಶ್ರೀನಿವಾಸ್ ಬಿಲ್ ಗೇಟ್ಸ್ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಈ ಹದಿನಾಲ್ಕು ವರ್ಷದ ದಾರಿ ಶ್ರೀನಿವಾಸ್ಗೆ ಸುಗಮವೇನು ಆಗಿರಲಿಲ್ಲ.ಎಲ್ಲರಂತೆ ಶ್ರೀನಿವಾಸ್ ಕೂಡ ಸಾಕಷ್ಟು ಸ್ಟ್ರಗಲ್ಮಾಡಿದ್ದಾರೆ. ಬಿಲ್ ಗೇಟ್ಸ್ ಸಬ್ಜೆಕ್ಟ್ ಮಾಡಿಕೊಂಡು ನಿರ್ಮಾಪಕರಿಗಾಗಿ ಅಲೆದಿದ್ದಾರೆ. ಆಗ ಕೈ ಹಿಡಿದಿದ್ದು ಇವ್ರ ಸ್ನೇಹಿತರು. ಶ್ರೀನಿವಾಸ್ ಪ್ರತಿಭೆ ಅರಿತಿದ್ದ ಇವ್ರ ಸ್ನೇಹಿತರು ತಾವೇ ಮುಂದೆ ಬಂದು ಸಿನಿಮಾನಿರ್ಮಾಣ ಮಾಡಲು ಗೆಳೆಯನಿಗೆ ಸಾಥ್ ನೀಡಿದ್ದಾರೆ. ಈ ಎಲ್ಲಾ ಸ್ನೇಹಿತರ ಸಪೋರ್ಟ್ನಿಂದಾಗಿ ಇಂದು ಶ್ರೀನಿವಾಸ್ಕನಸು ನನಸಾಗಿ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ.
 
ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್ನಡಿ ಬಿಲ್ ಗೇಟ್ಸ್ ಚಿತ್ರವನ್ನುಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದ್ದು, ನೊಬಿನ್ ಪೌಲ್ ಚಿತ್ರಕ್ಕೆ ಸಂಗೀತ ನೀಡಿರುವ ಈ ಚಿತ್ರ ಫೆಬ್ರವರಿ 7ಕ್ಕೆ ಹಾಸ್ಯದ ರಸದೌತಣ ನೀಡಲು ಚಿತ್ರಮಂದಿರಕ್ಕೆ ಬರುತ್ತಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ