ವೈರಲ್ ಆಯ್ತು ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿಯ ಆಮ್ಲೆಟ್ ವಿಡಿಯೋ

ಮಂಗಳವಾರ, 24 ನವೆಂಬರ್ 2020 (10:27 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಪುತ್ರಿ ಚಾರಿತ್ರ್ಯಾಳ ಆಮ್ಲೆಟ್ ರೆಸಿಪಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಇದೀಗ ವೈರಲ್ ಆಗಿದೆ.


ಕಾರಣ, ಈ ವಿಡಿಯೋದಲ್ಲಿ ಚಾರಿತ್ರ್ಯ ಪಕ್ಕಾ ಆಂಗ್ಲರಂತೆ ಭಾಷೆ ಬಳಕೆ ಮಾಡಿ ಆಮ್ಲೆಟ್ ಮಾಡುವ ವಿಧಾನವನ್ನು ಬಹಳ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ನಡುವೆ ಬರುವ ಗಣೇಶ್ ಏನು ಮಾಡ್ತಿದ್ದೀಯಾ ಮಗಳೇ ಎಂದು ಕಾಲೆಳೆಯುತ್ತಾರೆ.  ಅಪ್ಪ-ಮಗಳ ಈ ಕಾಮಿಡಿ ಟೈಮ್ ವಿಡಿಯೋವನ್ನು ಗಣೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ