ಮೆಚ್ಚಿನ ಚಾರ್ಲಿ ಜತೆ ಕಾಶ್ಮೀರಕ್ಕೆ ತೆರಳಲಿರುವ ರಕ್ಷಿತ್ ಶೆಟ್ಟಿ

ಮಂಗಳವಾರ, 24 ನವೆಂಬರ್ 2020 (09:22 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ‘ಚಾರ್ಲಿ 777’ ಸಿನಿಮಾದ ಅಂತಿಮ ಹಂತದ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ತೆರಳಲಿದ್ದಾರೆ.


ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಟ್ರಾವೆಲ್ ಬೇಸ್ ಕತೆ ಹೊಂದಿದ್ದು, ಹೀಗಾಗಿ ಗೋವಾ, ತಮಿಳುನಾಡು ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ. ಇದೀಗ ಅಂತಿಮ ಹಂತದ ಚಿತ್ರೀಕರಣ ನವಂಬರ್ 26 ರಿಂದ ಕಾಶ್ಮೀರದಲ್ಲಿ ನಡೆಯಲಿದೆ. ಸುಮಾರು 50 ಕ್ಕೂ ಹೆಚ್ಚು ಜನರ ಚಿತ್ರತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ