ಗಣೇಶ ಹಬ್ಬಕ್ಕೆ ಸ್ಯಾಂಡಲ್ ವುಡ್ ನಲ್ಲಿ ಚುರುಕಾಗಲಿದೆ ಚಟುವಟಿಕೆ

ಗುರುವಾರ, 9 ಸೆಪ್ಟಂಬರ್ 2021 (11:23 IST)
ಬೆಂಗಳೂರು: ನಾಳೆ ಗಣೇಶ ಹಬ್ಬವಿದ್ದು, ಸ್ಯಾಂಡಲ್ ವುಡ್ ನಲ್ಲೂ ಚಟುವಟಿಕೆ ಗರಿಗೆದರಿದೆ. ಹೊಸ ಭರವಸೆಯೊಂದಿಗೆ ಹಲವು ಸಿನಿಮಾಗಳು ಹೊಸ ಕೆಲಸಕ್ಕೆ ಕೈ ಹಾಕಲಿವೆ.


ಗಣೇಶ ಹಬ್ಬಕ್ಕೆ ಲೂಸ್ ಮಾದ ಯೋಗಿ ನಟಿಸಿದ ‘ಲಂಕೆ’ ಸೇರಿದಂತೆ ಕೆಲವು ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದರ ಹೊರತಾಗಿ ಹಲವು ಸಿನಿಮಾಗಳ ಟ್ರೈಲರ್, ಟೀಸರ್, ಫಸ್ಟ್ ಲುಕ್ ಟೈಟಲ್ ಲಾಂಚ್ ಕಾರ್ಯಕ್ರಮಗಳೂ ನಡೆಯಲಿವೆ.

ಕೊರೋನಾದಿಂದ ಹೊಡೆತಕ್ಕೊಳಗಾಗಿರುವ ಚಿತ್ರರಂಗಕ್ಕೆ ಈ ಗಣೇಶ ಹಬ್ಬ ವಿಘ್ನ ನಿವಾರಕನಾಗಿ ಪರಿಣಮಿಸಲಿ ಎನ್ನುವುದು ಸಿನಿಪ್ರಿಯರ ಆಶಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ