ಮೊನ್ನೆ ಡ್ರಗ್ಸ್, ಇದೀಗ ಗರ್ಲ್ ಫ್ರೆಂಡ್ ಸುದ್ದಿ: ಗಟ್ಟಿಮೇಳ ನಟ ಅಭಿದಾಸ್ ಹೇಳಿದ್ದೇನು?

ಸೋಮವಾರ, 19 ಅಕ್ಟೋಬರ್ 2020 (10:26 IST)
ಬೆಂಗಳೂರು: ಇತ್ತೀಚೆಗಷ್ಟೇ ಡ್ರಗ್ಸ್ ಪ್ರಕರಣದ ಕುರಿತಂತೆ ತಮ್ಮನ್ನು ವಿಚಾರಣೆಗೆ ಕರೆದಿದ್ದಕ್ಕೆ ತಮ್ಮನ್ನು ತಪ್ಪಿತಸ್ಥನೆಂದು ಬಿಂಬಿಸಿದ್ದರಿಂದ ಬೇಸರಗೊಂಡಿದ್ದ ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟ ವಿಕ್ರಾಂತ್ ಅಲಿಯಾಸ್ ಅಭಿದಾಸ್ ಇದೀಗ ಮತ್ತೊಮ್ಮೆ ಗಾಸಿಪ್ ಗಳಿಗೆ ಆಹಾರವಾಗಿದ್ದಾರೆ.


ಕೆಲವು ಆನ್ ಲೈನ್ ತಾಣಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬರುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಅಭಿದಾಸ್ ಸ್ಪಷ್ಟನೆ ನೀಡಿದ್ದಾರೆ. ಆನ್ ಲೈನ್ ತಾಣವೊಂದರಲ್ಲಿ ತಮಗೆ ಗರ್ಲ್ ಫ್ರೆಂಡ್ ಇರುವ ವಿಚಾರವಾಗಿ ಸುಳ್ಳು ಸುದ್ದಿ ಪ್ರಕಟವಾಗಿದೆ. ಇನ್ನೊಂದು ಮಾಧ್ಯಮದಲ್ಲಿ ಅಭಿ ಭಾರೀ ಹೈ ಫೈ ಜೀವನ ಶೈಲಿ ನಡೆಸುತ್ತಾರೆಂದು ವರದಿಯಾಗಿದೆ. ಈ ಎಲ್ಲಾ ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅಭಿ ಇಂತಹದ್ದೆಲ್ಲಾ ಏನೂ ಇಲ್ಲ, ನನಗೆ ಗರ್ಲ್ ಫ್ರೆಂಡೂ ಇಲ್ಲ, ಹೈಫೈ ಜೀವನ ಮಾಡುವಷ್ಟು ಶ್ರೀಮಂತನೂ ನಾನಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ