ಗೋಲ್ಡನ್ ಗಣಿಗೆ ಜನ್ಮದಿನದ ಸಂಭ್ರಮ: ಗಣೇಶ್ ಮುಂಬರುವ ಸಿನಿಮಾಗಳು ಯಾವುವು?

ಶನಿವಾರ, 2 ಜುಲೈ 2022 (08:30 IST)
ಬೆಂಗಳೂರು: ಚೆಲ್ಲಾಟದ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗಿ ಗುರುತಿಸಿಕೊಂಡ ನಟ ಗೋಲ್ಡನ್ ಸ್ಟಾರ್ ಗಣೇಶ್ ಬಳಿಕ ಮುಂಗಾರು ಮಳೆ ಸಿನಿಮಾ ಮೂಲಕ ಹೆಂಗಳೆಯರ ನೆಚ್ಚಿನ ನಟರಾದರು. ಅವರಿಗೆ ಇಂದು ಜನ್ಮದಿನದ ಸಂಭ್ರಮ.

ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನಕ್ಕೆ ಗಾಳಿಪಟ 2 ಚಿತ್ರ ತಂಡ ರೊಮ್ಯಾಂಟಿಕ್ ಹಾಡೊಂದನ್ನು ಉಡುಗೊರೆಯಾಗಿ ನೀಡುತ್ತಿದೆ. ಈ ಹಾಡಿಗೆ ಫೇವರಿಟ್ ಕಾಂಬಿನೇಷನ್  ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರೆ ಸೋನು ನಿಗಂ ಹಾಡಿದ್ದಾರೆ.

ಗಣೇಶ್ ಕೈಯಲ್ಲಿ ಈಗ ಕೆಲವು ಸಿನಿಮಾಗಳಿದ್ದು ಅವುಗಳ ಪೈಕಿ ಗಾಳಿಪಟ 2, ತ್ರಿಬಲ್ ರೈಡಿಂಗ್ ಬಿಡುಗಡೆಗೆ ಸಿದ್ಧವಿದೆ. ಇದಲ್ಲದೆ, ಬಾನದಾರಿಯಲ್ಲಿ, ಸಿಂಪಲ್ ಸುನಿ ಜೊತೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಫ್ಯಾಮಿಲಿ ವರ್ಗ ಕೂತು ವೀಕ್ಷಿಸಬಹುದಾದ ರೊಮ್ಯಾಂಟಿಕ್ ಕತೆಗಳೊಂದಿಗೆ ಗಣೇಶ್ ಈ ವರ್ಷವೂ ನಿಮ್ಮನ್ನು ರಂಜಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ