ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಬಳಿಕ ಇದೀಗ ಪುತ್ರನೂ ಸಿನಿಮಾಗೆ! ಯಾವ ಸಿನಿಮಾ ಗೊತ್ತಾ?

ಶುಕ್ರವಾರ, 12 ಏಪ್ರಿಲ್ 2019 (07:52 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಅಪ್ಪನ ಜತೆ ‘ಚಮಕ್’ ಸಿನಿಮಾದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ಪುತ್ರ ವಿಹಾನ್ ಕೂಡಾ ಕಿರಿಯ ವಯಸ್ಸಿನಲ್ಲೇ ಬಣ್ಣ ಹಚ್ಚುತ್ತಿದ್ದಾರೆ.


ವಿಹಾನ್ ಕೂಡಾ ಅಪ್ಪನ ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಗಣೇಶ್ ಅಭಿನಯಿಸುತ್ತಿರುವ ‘ಗೀತಾ’ ಸಿನಿಮಾದಲ್ಲಿ ವಿಹಾನ್ ಪುಟ್ಟ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ.

 ಈ ವಿಚಾರವನ್ನು ಖುದ್ದು ಗಣೇಶ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದು, ಮಗನಿಗೆ ನಿಮ್ಮ ಬೆಂಬಲವಿರಲಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ. ವಿಹಾನ್ ಪಾತ್ರವೇನೆಂಬುದು ಇನ್ನೂ ಬಹಿರಂಗವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ