ಒಳ್ಳೆ ಹುಡುಗ ಪ್ರಥಮ್ ಒಬ್ಬ ಪರಮ ಭ್ರಷ್ಟ ಪೊಲೀಸ್ ಅಧಿಕಾರಿಯಾಗಲಿದ್ದಾರಂತೆ
ಶುಕ್ರವಾರ, 22 ಜೂನ್ 2018 (13:58 IST)
ಬೆಂಗಳೂರು : ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯರಾದ ಒಳ್ಳೆ ಹುಡುಗ ಪ್ರಥಮ್ ಅವರು ಇದೀಗ ಪರಮ ಭ್ರಷ್ಟಪೊಲೀಸ್ ಅಧಿಕಾರಿಯಾಗಿ ಸಿನಿಮಾವೊಂದರಲ್ಲಿ ನಟಿಸಲಿದ್ದಾರಂತೆ.
‘ದೇವ್ರಂಥ ಮನುಷ್ಯ’ , 'ಎಮ್ ಎಲ್ ಎ' , ‘ನಟ ಭಯಂಕರ’ ಚಿತ್ರಗಳಲ್ಲಿ ನಟಿಸಿದ ನಟ ಪ್ರಥಮ್ ಅವರು ಇದೀಗ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಅದಕ್ಕೆ 'ತಿಮಿಂಗಲ' ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಅವರು ಭ್ರಷ್ಟಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಆ ಭ್ರಷ್ಟ ಅಧಿಕಾರಿ ದುಡ್ಡು ತಿನ್ನುವುದನ್ನು ಜನ ತಿಮಿಂಗಿಲಕ್ಕೆ ಹೋಲಿಸುವ ಕಾರಣಕ್ಕೆ ಚಿತ್ರಕ್ಕೆ "ತಿಮಿಂಗಿಲ'’ ಎಂಬ ಹೆಸರನ್ನು ಇಡಲಾಗಿದೆಯಂತೆ.
ಅವಿನಾಶ್ ಎಂಬುವರು ನಿರ್ದೇಶಿಸುತ್ತಿರುವ ಈ ಚಿತ್ರ ಜುಲೈನಲ್ಲಿ ಸೆಟ್ಟೇರಲಿದ್ದು, ಚಿತ್ರದ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಮುಂದಿನ ತಿಂಗಳು ಚಿತ್ರ ಶುರುವಾಗಲಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ