BBK12: ಗಂಡನಿಂದ ವಿಚ್ಛೇದನ ಪಡೆಯಲು ನಿಜ ಕಾರಣವೇನೆಂದು ಹೇಳಿದ ಜಾನ್ವಿ
ಸಹ ಸ್ಪರ್ಧಿ ಮಲ್ಲಮ್ಮನ ಜೊತೆ ಜಾನ್ವಿ ಮುಕ್ತವಾಗಿ ಈ ವಿಚಾರ ಹಂಚಿಕೊಂಡಿದ್ದಾರೆ. ಇದುವರೆಗೆ ಹಲವು ಸಂದರ್ಶನಗಳಲ್ಲಿ ಜಾನ್ವಿ ವಿಚ್ಛೇದನದ ಬಗ್ಗೆ ಮಾತನಾಡಿದ್ದು ಇದೆ. ಆದರೆ ನಿಜ ಕಾರಣವೇನೆಂದು ಹೇಳಿರಲಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಸಾಧ್ಯವೇ ಇಲ್ಲ ಎಂದಾಗ ದೂರವಾದೆವು ಎನ್ನುತ್ತಿದ್ದರು.
ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ನಿಜ ಕಾರಣವನ್ನು ತಿಳಿಸಿದ್ದಾರೆ. ಮಲ್ಲಮ್ಮನ ಜೀವನದ ಬಗ್ಗೆ ಮಾತನಾಡುವಾಗ ಜಾನ್ವಿ ತಮ್ಮ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ. ಆಗ ಮಲ್ಲಮ್ಮ ನಿಮ್ಮ ಪತಿ ಏನು ಮಾಡುತ್ತಾರೆ ಎಂದು ಕೇಳಿದ್ದಾರೆ. ಅದಕ್ಕೆ ಜಾನ್ವಿ ನಾವಿಬ್ಬರೂ ದೂರವಾಗಿದ್ದೇವೆ ಎಂದಿದ್ದಾರೆ. ಆಗ ಮಲ್ಲಮ್ಮ ಹಾಗೆಲ್ಲಾ ಗಂಡನನ್ನು ಬಿಡಬಾರದು ಎಂದು ಬುದ್ಧಿ ಹೇಳಿದ್ದಾರೆ.
ಇದಕ್ಕೆ ಜಾನ್ವಿ ನಾನು ಸುಮ್ಮನೇ ಬಿಡಲಿಲ್ಲ. ನಾನು ಜೊತೆಯಲ್ಲಿಇರುವಾಗಲೇ ಅವರಿಗೆ ಬೇರೆ ಮದುವೆಯಾಗಿ ಮಗು ಆಗಿತ್ತು. ಅದಕ್ಕೆ ಬಿಟ್ಟಿದ್ದು ಎಂದು ನಿಜ ಕಾರಣ ತಿಳಿಸಿದ್ದಾರೆ. ಇದೀಗ ಜಾನ್ವಿ ತಮ್ಮ ಮಗನೊಂದಿಗೆ ಸ್ವತಂತ್ರವಾಗಿ ಬದುಕುತ್ತಿದ್ದಾರೆ.