ಅಪ್ಪು ಅಭಿಮಾನಿಗಳಿಗೆ ಗುಡ್‌ನ್ಯೂಸ್: ಅಶ್ವಿನಿ ಬರೆದಿರುವ ಪುನೀತ್ ಬಯೋಗ್ರಫಿ ಶೀಘ್ರದಲ್ಲೇ ಬಿಡುಗಡೆ
ಪುನೀತ್ ಪತ್ನಿ ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಜೊತೆಯಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಇದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಸದ್ಯ ಬುಕ್‌ನ ಕವರ್ ಪೇಜ್ ಹೇಗಿದೆ ಎಂಬುದನ್ನು ಪುನೀತ್ ಜನ್ಮದಿನದಂದು ಸೋಮವಾರ ಅಶ್ವಿನಿ ರಿವೀಲ್ ಮಾಡಿದ್ದಾರೆ. ಅಪ್ಪು ಬಯೋಗ್ರಫಿ ಬರಲಿರುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ.