ಬಾಹುಬಲಿ 2 ದೃಶ್ಯ ಸೋರಿಕೆ ಮಾಡಿದ ವ್ಯಕ್ತಿಯ ಬಂಧನ
ಹೈದಾರಾಬಾದ್: ಬಾಹುಬಲಿ ಚಿತ್ರದ ಎರಡನೇ ಭಾಗದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ನಡುವೆ ವ್ಯಕ್ತಿಯೊಬ್ಬ ಚಿತ್ರದ ವಿಡಿಯೋ ಸೋರಿಕೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಗ್ರಾಫಿಕ್ ವಿನ್ಯಾಸದ ತಂಡದಲ್ಲಿದ್ದ ಕೃಷ್ಣ ಎಂಬಾತ ಬಂಧಿತ ವ್ಯಕ್ತಿ.
ಈತ ಚಿತ್ರದ ಕೆಲವು ದೃಶ್ಯಗಳನ್ನು ಆನ್ ಲೈನ್ ಗಳಲ್ಲಿ ಹರಿಯಬಿಟ್ಟಿದ್ದಾನೆಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಹಿಂದೊಮ್ಮೆ ಬಾಹುಬಲಿ 2 ಚಿತ್ರದ ಕತೆ ವಾಟ್ಸಾಪ್ ತಾಣದಲ್ಲಿ ಬಹಿರಂಗವಾಗಿದೆ ಎಂಬ ಗುಲ್ಲೆಬ್ಬಿತ್ತು. ಆನ್ ಲೈನ್ ಗಳಲ್ಲಿ ಚಿತ್ರದ ಕತೆ ಜಗಜ್ಜಾಹೀರಾಗಿತ್ತು. ಆದರೆ ಅದು ನಿಜವಾದ ಕತೆಯಲ್ಲ ಎಂದೂ ಚಿತ್ರತಂಡಗಳು ಸ್ಪಷ್ಟಪಡಿಸಿತ್ತು.