ಸಂಗೀತ ನಿರ್ದೇಶಕೆ ಎಆರ್ ರೆಹಮಾನ್ ಗೆ ಜಿಎಸ್ಟಿ ಕೌನ್ಸಿಲ್ ನೋಟಿಸ್

ಗುರುವಾರ, 13 ಫೆಬ್ರವರಿ 2020 (12:05 IST)
ಮುಂಬೈ: ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಗೆ ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಜಿಎಸ್ಟಿ ಕೌನ್ಸಿಲ್ ನೋಟಿಸ್ ಜಾರಿ ಮಾಡಿದೆ.


ಎಆರ್ ರೆಹಮಾನ್ ಹಲವು ಸಂಗೀತ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೋಟ್ಯಾಂತರ ರೂಪಾಯಿ ಗಳಿಕೆ ಮಾಡುತ್ತಾರೆ. ಈ ಸಂಬಂಧ ಸುಮಾರು 6.79 ಕೋಟಿ ರೂ. ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಜಿಎಸ್ಟಿ ಕೌನ್ಸಿಲ್ ನೋಟಿಸ್ ಜಾರಿ ಮಾಡಿದೆ.

ಮಾರ್ಚ್‍ 4 ರೊಳಗಾಗಿ ಪೆನಾಲ್ಟಿ ಸಹಿತ ಬಾಕಿ ಮೊತ್ತವನ್ನು ಪಾವತಿಸುವಂತೆ ರೆಹಮಾನ್ ಗೆ ಜಿಎಸ್ಟಿ ಕೌನ್ಸಿಲ್ ಸೂಚನೆ ನೀಡಿದೆ. ಆದರೆ ರೆಹಮಾನ್ ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಪಡೆಯುವ ಸಂಭಾವನೆ ಸೇವಾ ತೆರಿಗೆಯ ಅಡಿಯಲ್ಲಿ ಬರುವುದಿಲ್ಲ ಎಂದು ರೆಹಮಾನ್ ಕೌನ್ಸಿಲ್ ಸದಸ್ಯರು ವಾದಿಸಿದ್ದಾರೆ. ಈ ಸಂಬಂಧ ರೆಹಮಾನ್ ಕಾನೂನು ಹೋರಾಟ ಮಾಡುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ