ಬೆಂಗಳೂರು: ಲಾಕ್ ಡೌನ್ ನಿಂದಾಗಿ ಕಾರ್ಮಿಕರೂ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅರ್ಧಕ್ಕೇ ನಿಂತ ಕೆಲಸಗಳು ಅರ್ಧದಲ್ಲೇ ಬಾಕಿಯಾಗಿವೆ. ಈ ನಡುವೆ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಎದುರಿನ ರಸ್ತೆಯ ಗುಂಡಿಯನ್ನು ತಾವೇ ಮುಚ್ಚಿ ಸುದ್ದಿಯಾಗಿದ್ದಾರೆ.
ತಮ್ಮ ಮನೆ ಎದುರಿನ ರಸ್ತೆ ಗುಂಡಿಯನ್ನು ತಾವೇ ಹಾರೆ ತೆಗೆದುಕೊಂಡು ಗುಂಡಿ ಮುಚ್ಚಿ ಜನರಿಗೂ ತೊಂದರೆಯಾಗದಂತೆ ಕೆಲಸ ಮಾಡಿದ್ದಾರೆ ಹಂಸಲೇಖ. ಈ ಇಳಿವಯಸ್ಸಿನಲ್ಲೂ ಇಂತಹ ಕೆಲಸಕ್ಕೆ ಮುಂದಾಗಿರುವುದಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.