ಎಲ್ಲರಿಗೂ ಕೌಂಟರ್ ಕೊಡುತ್ತಿದ್ದ ರಜತ್ ಬಾಯಿಯನ್ನೇ ಮುಚ್ಚಿಸಿದ ಹನಮಂತು

Sampriya

ಭಾನುವಾರ, 19 ಜನವರಿ 2025 (15:50 IST)
Photo Courtesy X
ಬಿಗ್‌ಬಾಸ್ ಸೀಸನ್ 11 ಮುಗಿಯಲು ಕೇವಲ ಒಂದು ವಾರವಷ್ಟೇ ಬಾಕಿಯಿದೆ. ಶನಿವಾರದ ಎಪಿಸೋಡ್‌ನಲ್ಲಿ ಗೌತಮಿ ಜಾಧವ್ ಅವರು ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರನಡೆದಿದ್ದಾರೆ.

ಈ ವಾರ ಡಬಲ್ ಎಲಿಮಿನೇಷನ್ ಶಾಕ್ ನೀಡಿರುವ ಕಿಚ್ಚ ಸುದೀಪ್ ಇಂದು ಮತ್ತೊಬ್ಬರನ್ನು ಮನೆಯಿಂದ ಹೊರ ಕರೆಸಿಕೊಳ್ಳುತ್ತಿದ್ದಾರೆ.

ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಎದುರೇ ರಜತ್‌ಗೆ ಹನಮಂತು ಸರಿಯಾಗಿ ಕೌಂಟರ್ ಕೊಟ್ಟಿದ್ದಾನೆ.

ಬಿಗ್‌ಬಾಸ್ ಸಿನಿಮಾದಲ್ಲಿ ಯಾರ ಕತೆ ಹಿಟ್, ಯಾರ ಕತೆ ಫ್ಲಾಪ್ ಎಂದು ಸುದೀಪ್ ಕೇಳಿದ ಪ್ರಶ್ನೆಗೆ ರಜತ್ ಅವರದ್ದು ಫ್ಲಾಪ್ ಕತೆ ಎಂದು ಹನಮಂತು ಹೇಳಿದ್ದಾನೆ.

ಇದರಿಂದ ಕೋಪಗೊಂಡ ರಜತ್, ಮಾವ ಮಾವ ಎಂದು ಹೇಳಿಕೊಂಡು ಮಾವನಿಗೆ ಚುಚ್ಚಿದ್ದೀಯಾ, ಮಾವ ಹೋದ್ಮೇಲೆ ಅವನ ಗ್ಲಾಸ್‌ನಲ್ಲಿ ನೀರು ಕುಡಿಯುವ ಡೌವ್‌ಗಳನ್ನು ನಾವು ನೋಡಿದ್ದೇವೆ.  ಯಾವುದಕ್ಕೂ ಸ್ಟ್ರಾಂಗ್ ರಿಷನ್ ಕೊಟ್ಟಿರುವುದನ್ನು ನಾನಂತೂ ನೋಡಿಲ್ಲ ಎಂದು ಹನಮಂತನ ಮೇಲೆ ರಜತ್ ರೇಗಿದ್ದಾರೆ.

ಇದಕ್ಕೆ ಕೌಂಟರ್ ಕೊಟ್ಟ ಹನುಮಂತು ಮೊದಲು ನೀನು ಸಿಲ್ಲಿ ರಿಷನ್ ಅರ್ಥ ಮಾಡಿಕೋ, ಆಮೇಲೆ ಸ್ಟ್ರಾಂಗ್ ರಿಷನ್ ಹೇಳ್ತಿನಿ ಎಂದು ಹಾಡಿನಲ್ಲೇ ಗುಮ್ಮಿದ್ದಾನೆ.

ಯಾರ ಕತೆ ಹಿಟ್, ಯಾರ ಕತೆ ಫ್ಲಾಪ್?

ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್‌ಫುಲ್‌‌ಕತೆ #colorfulstory #Kicchasudeepa#BBKPromo pic.twitter.com/7dhtl4bEcf

— Colors Kannada (@ColorsKannada) January 19, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ