BigBoss Season 11: ಗುರಿ ತಪ್ಪಿದ ಸ್ಪರ್ಧಿಗಳ ಕಿವಿ ಹಿಂಡಲು ರಗಡ್ ಆಗಿಯೇ ಬಂದ ಕಿಚ್ಚ ಸುದೀಪ್‌

Sampriya

ಶನಿವಾರ, 11 ಜನವರಿ 2025 (18:00 IST)
Photo Courtesy X
ಬೆಂಗಳೂರು: ಬಿಗ್‌ಬಾಸ್‌ ಸೀಸನ್ ಫಿನಾಲೆಗೆ ಕೇವಲ 2 ವಾರಗಳು ಬಾಕಿಯಿದ್ದು, ಈ ವಾರ ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಹನಮಂತು ಫೈನಲ್ ಟಿಕೆಟ್‌ ಅನ್ನು ಗೆಲ್ಲುವ ಮೂಲಕ ಮೊದಲ ಫಿನಾಲೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಅದಲ್ಲದೆ ಈ ಸೀಸನ್‌ ಕೊನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಈ ವಾರದ ಟಿಕೆಟ್ ಟು ಫಿನಾಲೆ ಸ್ಪರ್ಧೆಯ ವೇಳೆ ಸ್ಪರ್ಧಿಗಳು ಗದ್ದಲ ಮಾಡಿ ಆರೋಪ, ಅಸಮಾಧಾನಗಳು ಹೊರಹಾಕಿದ್ದರು. ಆಟದ ವೇಳೆ ಭವ್ಯಾ, ಹನಮಂತು ಮೇಲೆ ಹೊಡೆದಿದ್ದರು. ಅದಲ್ಲದೆ ಕ್ಯಾಪ್ಟನ್ ರಜತ್ ಅವರು ಹನಮಂತು ತಂಡಕ್ಕೆ ಫೇವರ್ ಮಾಡಿದ್ದಾರೆ ಎಂದು ಧನರಾಜ್ ತಂಡ ಆರೋಪ ಮಾಡಿತ್ತು. ಇದೀಗ ವಾರದ ಲೆಕ್ಕಚಾರದ ಬಗ್ಗೆ ಮಾತನಾಡಲು ರಗಡ್ ಆಗಿಯೇ ಕಿಚ್ಚ ಸುದೀಪ್‌ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಗೆಲುವಿನ ಗುರಿ ಹತ್ತಿರ ಬರುತ್ತಿದ್ದ ಹಾಗೆನೇ ವೇಗದ ಮಿತಿ ಮೀರಿ ಆಟದ ಗತಿ ತಮ್ಮಿಸಿದವರು ಯಾರು ಯಾರು, ಕಣ್ಣು ಮುಚ್ಚಿ ನಿರ್ಧಾರಗಳನ್ನು ತೆಗೆದುಕೊಂಡವರು ಯಾರು ಎಂದು ಪ್ರಶ್ನೆ ಎತ್ತಿದ್ದಾರೆ.

ವೇಗದ ಮಿತಿಮೀರಿ, ಆಟದ ಗತಿ ತಪ್ಪಿಸಿದೋರು ಯಾರು?

ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್‌ಫುಲ್‌‌ಕತೆ #colorfulstory #Kicchasudeepa #BBKPromo pic.twitter.com/mJV4WFr8KF

— Colors Kannada (@ColorsKannada) January 11, 2025

ವಾರದ ಕಿಚ್ಚನ ಕತೆಯಲ್ಲಿ ಇದೀಗ ಭವ್ಯಾ ಹಾಗೂ ರಜತ್‌ಗೆ ಕಿಚ್ಚನಿಂದ ಸಕತ್ ಕ್ಲಾಸ್ ಇದೆ ಎಂದು ಲೆಕ್ಕಚಾರ ಹಾಕಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ