ಐತಿಹಾಸಿಕ ಸ್ಥಳದಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಳ್ಳಲಿರುವ ಬಿಂದಾಸ್ ನಟಿ ಹನ್ಸಿಕಾ ಮೊಟ್ವಾನಿ
ಜೈಪುರದ ಐತಿಹಾಸಿಕ ಸ್ಥಳವೊಂದರಲ್ಲಿ ಹನ್ಸಿಕಾ ಮದುವೆಯಾಗಲಿದ್ದಾರಂತೆ. ಈ ಮದುವೆ ಕಾರ್ಯಕ್ರಮ 10 ದಿನಗಳ ಕಾಲ ಸಾಂಪ್ರದಾಯಿಕವಾಗಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ದೆಹಲಿ ಮೂಲದ ಉದ್ಯಮಿಯೊಬ್ಬರ ಜೊತೆ ಹನ್ಸಿಕಾ ಮದುವೆಯಾಗಲಿದ್ದಾರೆ. ಈ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.