ಬೋಲ್ಡ್ ಹುಡುಗಿ ಹರಿಪ್ರಿಯಾ ಬರ್ತ್ ಡೇ

ಶನಿವಾರ, 29 ಅಕ್ಟೋಬರ್ 2016 (10:55 IST)
ಬೆಂಗಳೂರು: ಕನ್ನಡದ ಬೆಡಗಿ ಹರಿಪ್ರಿಯಾಗೆ ಇಂದು ಜನುಮ ದಿನ. ಇತ್ತೀಚೆಗೆ ಬಿಡುಗಡೆಯಾದ ನೀರ್ ದೋಸೆ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಅವರ ನೀರ್ ದೋಸೆ ಹೀರೋ ಜಗ್ಗೇಶ್ ಸೇರಿದಂತೆ ಹಲವು ಮಂದಿ ಆಕೆಗೆ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ನೀರ್ ದೋಸೆ ಚಿತ್ರದಲ್ಲಿ ಆಕೆ ಹಾಟ್ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದರಲ್ಲಿ  ಅವರದ್ದು ವೇಶ್ಯೆಯ ಪಾತ್ರವಾಗಿತ್ತು.

ಕನ್ನಡ ಮಾತ್ರವಲ್ಲದೆ ತಮಿಳಿನಲ್ಲೂ ಒಂದು ಚಿತ್ರದಲ್ಲಿ ನಟಿಸುತ್ತಿದ್ದು ಇನ್ನೂ ಪ್ರೊಡಕ್ಷನ್ ಹಂತದಲ್ಲಿದೆ.  ಇಂತಿಪ್ಪ ಹರಿಪ್ರಿಯಾಗೆ ಆಲ್ ದಿ ಬೆಸ್ಟ್ ಹೇಳುವುದರ ಜತೆಗೆ ಹ್ಯಾಪಿ ಬರ್ತ್ ಡೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ