ಮತ್ತೆ ಹರಿಪ್ರಿಯಾ ಬೋಲ್ಡ್ ನಟನೆಗೆ ಬೋಲ್ಡ್ ಆದ ಪ್ರೇಕ್ಷಕರು

ಸೋಮವಾರ, 29 ಏಪ್ರಿಲ್ 2019 (08:43 IST)
ಬೆಂಗಳೂರು: ಹರಿಪ್ರಿಯಾ ನೀರ್ ದೋಸೆಯಲ್ಲಿ ಬೋಲ್ಡ್ ಆದ ವೇಶ್ಯೆ ಪಾತ್ರ ಮಾಡಿದ ಮೇಲೆ ಇತ್ತೀಚೆಗೆ ಬೆಲ್ ಬಾಟಂನಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಬೋಲ್ಡ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.


ಹರಿಪ್ರಿಯಾ, ಯಶ್ ಶೆಟ್ಟಿ ಪ್ರಮುಖ ಪಾತ್ರವಹಿಸಿರುವ ‘ಸೂಜಿದಾರ’ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಟ್ರೈಲರ್ ನಲ್ಲಿ ಹರಿಪ್ರಿಯಾ ಮಾದಕತೆಗೆ, ಅದರಲ್ಲಿ ತೋರಿಸುವ ಸಾಧಾರಣ ಟೈಲರ್ ನ ಕತೆ ನೋಡಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದೆ. ಟ್ರೈಲರ್ ಗೆ 1 ಲಕ್ಷ ಲೈಕ್ಸ್ ಬಂದಿದೆ. ಮೇ 10 ರಂದು ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ